ಮೈಸೂರು : ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ), ಪ್ರಸಕ್ತ ಋತುವಿನಲ್ಲಿ ಅಗರಬತ್ತಿ, ಧೂಪ ಮತ್ತು ಸಂಬಂಧಿತ ಉತ್ಪನ್ನಗಳಿಗೆ ದೇಶದಲ್ಲಿ ಶೇಕಡ 50 ರಷ್ಟು ಅಧಿಕ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಿದೆ. ಮಾರುಕಟ್ಟೆ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ವರ್ಷದ ಈ ಕಾಲಘಟ್ಟದಲ್ಲಿ ಅಗರಬತ್ತಿ ಉದ್ಯಮ ಹಲವು ಬಗೆಯ ವೈವಿಧ್ಯಮಯ ಅಗರಬತ್ತಿಗಳನ್ನು ಉತ್ಪಾದಿಸುತ್ತದೆ. ಭಾರತೀಯ ಹಬ್ಬಗಳಲ್ಲಿ ಅಗರಬತ್ತಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ಪೂಜೆ ಮತ್ತು ಪ್ರಾರ್ಥನೆ ಸಂದರ್ಭದಲ್ಲಿ ಪ್ರಮುಖ ಅಂಶವಾಗಿ ಬಳಸುವ ಜತೆಗೆ, ಇದನ್ನು ಉಡುಗೊರೆ ಉತ್ಪನ್ನವಾಗಿಯೂ ಬಳಸಲಾಗುತ್ತದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಎಐಎಎಂಎ ಅಧ್ಯಕ್ಷ ಶರತ್ಬಾಬು, “ಅಗರಬತ್ತಿ ಉತ್ಪಾದಕರಿಗೆ ಮುಂದಿನ ಮೂರು- ನಾಲ್ಕು ತಿಂಗಳು ಅತ್ಯಂತ ಮಹತ್ವದ್ದು. ಏಕೆಂದರೆ ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ದುಪ್ಪಟ್ಟಾಗುತ್ತದೆ. ಜನಪ್ರಿಯ ಸುಗಂಧಗಳಾದ ಗುಲಾಬಿ, ಶ್ರೀಗಂಧ, ಸಂಪಿಗೆ ಹಾಗೂ ಮಲ್ಲಿಗೆಗಳಿಗೆ ವ್ಯಾಪಕ ಬೇಡಿಕೆ ಇದೆ. ಅದಾಗ್ಯೂ ಎಕ್ಸೋಟಿಕ್ ಮತ್ತು ಫ್ಯೂಷನ್ ಆಧರಿತ ಸುಗಂಧಗಳಾದ ಓರಿಯಂಟಲ್, ಫ್ರೂಟಿ ಮತ್ತು ಹೂಗಳ ಅಗರಬತ್ತಿಗಳಿಗೂ ಈ ಅವಧಿಯಲ್ಲಿ ಬೇಡಿಕೆ ಹೆಚ್ಚುತ್ತದೆ” ಎಂದು ಹೇಳಿದ್ದಾರೆ.
ಹಲವು ಹಬ್ಬಗಳಾದ ಗಣೇಶ ಚತುರ್ಥಿ, ದುರ್ಗಾಪೂಜೆಗಳಲ್ಲಿ ಹಬ್ಬದ ಆಚರಣೆಯ ಜತೆಗೆ ಧಾರ್ಮಿಕ ಪ್ರವಚನಗಳು ಕೂಡಾ ದೇವಸ್ಥಾನಗಳಲ್ಲಿ ಮತ್ತು ಪೆಂಡಾಲ್ಗಳಲ್ಲಿ ಇರುತ್ತವೆ. ಇಂಥ ಕಡೆಗಳಲ್ಲಿ 24-28 ಗಂಟೆ ಉರಿಯುವ ಅಗರಬತ್ತಿಗಳಿಗೆ ಬೇಡಿಕೆ ಇದೆ. ಇಂಥ ದೊಡ್ಡ ಗಾತ್ರದ ಅಗರಬತ್ತಿಗಳನ್ನು ಅಂದರೆ 2 ಅಡಿಯಿಂದ 8 ಅಡಿ ಉದ್ದದ ಅಗರಬತ್ತಿಗಳನ್ನು ವಿಶೇಷ ಬೇಡಿಕೆಗೆ ಅನುಗುಣವಾಗಿ ತಯಾರಿಸಲಾಗುತ್ತದೆ” ಎಂದು ವಿವರಿಸಿದ್ದಾರೆ.
ವಿಜಯ್ ಎಸ್.ಜಿ, ವ್ಯವಸ್ತಾಪಕ ಸಮಿತಿ ಸದಸ್ಯರು, ಎಐಎಎಂಎ. ಹೇಳುವಂತೆ, “ಸಣ್ಣ ಮತ್ತು ಮಧ್ಯಮ ಗಾತ್ರದ ಅಗರಬತ್ತಿ ಉದ್ಯಮಿಗಳು ಇಂಥ ಅವಧಿಗೆ ಕಾಯುತ್ತಿರುತ್ತಾರೆ. ಏಕೆಂದರೆ ಉದ್ಯಮ ಹೆಚ್ಚಿನ ಪ್ರಮಾಣದಲ್ಲಿ ಗಳಿಕೆ ಮಾಡಲು ಈ ಋತು ಅವಕಾಶ ಮಾಡಿಕೊಡುತ್ತದೆ. ಇದು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಉತ್ತಮ. ಇದಕ್ಕಾಗಿ ಸಾಧನಗಳು, ಶ್ರಮಶಕ್ತಿ, ಬ್ರಾಂಡಿಂಗ್ಗೆ ಹೆಚ್ಚಿನ ಪೂರ್ವಯೋಜನೆ ಅಗತ್ಯವಾಗುತ್ತದೆ. ಆಗ ಮಾತ್ರ ಹಬ್ಬದ ಬೇಡಿಕೆಯನ್ನು ಈಡೇರಿಸಲು ಸಾಧ್ಯ. ಹೆಚ್ಚಿನ ಅಗರಬತ್ತಿಗಳಿಗೆ ಈಗಾಗಲೇ ಮನವಿಗಳು ಬಂದಿವೆ. ನಮ್ಮ ಭಾಗದಲ್ಲಿ ಹಬ್ಬದ ಬೇಡಿಕೆಯನ್ನು ಈಡೇರಿಸಲು ನಾವು ಸಜ್ಜಾಗಿದ್ದೇವೆ”
ಆದ್ದರಿಂದ ಈ ಹಬ್ಬದ ಋತು ಸಂತೋಷದ ಉಡುಗೊರೆಯನ್ನು ತಮ್ಮ ಪ್ರೀತಿಪಾತ್ರರಿಗೆ ನೀಡಲು ಸೂಕ್ತವಾದ್ದು. ನೀವು ನೀಡುವ ಒಂದು ಬಾಕ್ಸ್ ಅಗರಬತ್ತಿ ಕೇವಲ ಉಡುಗೊರೆಯಾಗಿರದೇ, ಈ ಉದ್ಯಮದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಮಹಿಳೆಯರಿಗೆ ಆದಾಯದ ಮೂಲವೂ ಆಗಬಲ್ಲದು..
ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಬಗ್ಗೆ
ಸಂಘ 1946ರಲ್ಲಿ ಮೈಸೂರು ಊದುಬತ್ತಿ ಉತ್ಪಾದಕರ ಸಂಘವಾಗಿ ಏಳು ಮಂದಿ ಸಂಸ್ಥಾಪಕ ಸದಸ್ಯರೊಂದಿಗೆ ಆರಂಭವಾಗಿದೆ. ಅಗರಬತ್ತಿ ಉದ್ಯಮದ ಪ್ರಗತಿಗೆ ಎಐಎಎಂಎ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದು, ಇದರ ಸಂಬಂಧಿತ ಉದ್ದಿಮೆಗಳ ಬೆಳವಣಿಗೆಗೂ ಭಾರತದಲ್ಲಿ ನೆರವು ನೀಡುತ್ತಾ ಬಂದಿದೆ. 1980 ರ ದಶಕದ ಆರಂಭದಲ್ಲಿ ಭಾರತದ ಇತರ ರಾಜ್ಯಗಳ ಅಗರಬತ್ತಿ ಉತ್ಪಾದಕರ ಹೆಚ್ಚಿನ ಆಸಕ್ತಿ ಹಾಗೂ ಪಾಲ್ಗೊಳ್ಳುವಿಕೆಯ ಕಾರಣದಿಂದಾಗಿ ಎಂಓಎಂಎ ಅಯನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು. ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಪ್ರಸ್ತುತ 700 ಅಗರಬತ್ತಿ ಉತ್ಪಾದಕರು ಎಐಎಎಂಎ ಆಜೀವ ಸದಸ್ಯತ್ವ ಹೊಂದಿದ್ದಾರೆ. ಸಂಘವು ಉದ್ಯಮ ಪ್ರಗತಿಗಾಗಿ ಗಣನೀಯವಾಗಿ ಶ್ರಮಿಸುತ್ತಿದ್ದು, ಉದ್ಯಮ, ನೀತಿ ನಿರೂಪಕರು ಹಾಗೂ ಸರ್ಕಾರಿ ಸಂಸ್ಥೆಗಳ ಜತೆ ಕಾರ್ಯನಿರ್ವಹಿಸುವ ಮೂಲಕ ಅಗರಬತ್ತಿ ಉದ್ಯಮ ಹಾಗೂ ಸಂಬಂಧಿತ ಉದ್ಯಮದ ಹಲವು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಪ್ರಯತ್ನಗಳು ಅಗರಬತ್ತಿ ಉದ್ಯಮದ ಪ್ರಗತಿಗೆ ಬೆಂಬಲ ನೀಡುವುದಕ್ಕೆ ಸೀಮಿತವಾಗಿರದೇ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲೂ ಕಾರ್ಯ ನಿರ್ವಹಿಸುತ್ತಾ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.