ಬೆಂಗಳೂರು: ರಾಜ್ಯದ 10 ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಆನ್ಲೈನ್ನಲ್ಲೇ ದೇವರ ದರ್ಶನ, ಸೇವೆ ಮಾಡಿಸಬಹುದು. ಅಲ್ಲದೇ ದೇವರ ದರ್ಶನದ ಸಂದರ್ಭ ಕೊಠಡಿಗಳನ್ನೂ ಮುಂಗಡವಾಗಿ ಬುಕಿಂಗ್ ಮಾಡಿಸುವ ಯೋಜನೆ ಈಗಾಗಲೇ ಜಾರಿಗೆ ಬಂದಿದೆ.
ಬೆಂಗಳೂರಿನ ಬನಶಂಕರಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕೊಪ್ಪಳದ ಹುಲಿಗೆಮ್ಮ ದೇವಿ, ನಂಜನಗೂಡು ಶ್ರೀಕಂಠೇಶ್ವರ, ಸವದತ್ತಿ ರೇಣುಕಾ ಯಲ್ಲಮ್ಮ, ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಮೈಸೂರು ಚಾಮುಂಡೇಶ್ವರಿ, ಮಲೆಮಹದೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಮೊದಲಾದ ದೇವಸ್ಥಾನಗಳಲ್ಲಿ ಈ ಸೇವೆ ಆರಂಭಿಸಲಾಗುತ್ತಿದ್ದು, ತಿರುಮಲದಲ್ಲಿನ ಛತ್ರದಡಿ ಕೊಠಡಿಗಳನ್ನೂ ಬುಕಿಂಗ್ ಮೂಲಕ ಕಾದಿರಿಸಬಹುದಾಗಿದೆ.
ಕೊಠಡಿ ಬುಕಿಂಗ್ ಹಾಗೂ ಸೇವೆಗಳನ್ನು www.bangaloreone.gov.in ವೆಬ್ಸೈಟ್ ಲಾಗಿನ್ ಆಗುವ ಮೂಲಕ ಪಡೆಯಬಹುದು. ಆನ್ಲೈನ್ ಬುಕಿಂಗ್ಗಾಗಿ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದ್ದು, ಒಂದು ಗುರುತಿನ ಚೀಟಿಗೆ 2 ಕೊಠಡಿಗಳನ್ನು 2 ದಿನಗಳಿಗೆ ಪಡೆಯಬಹುದು.
ಆನ್ಲೈನ್ ಮೂಲಕ ಸೇವೆ ಮಾಡಿಸಿ ಕಾರಣಾಂತರಗಳಿಂದ ದೇವಸ್ಥಾನಗಳಿಗೆ ಹೋಗಲು ಆಗದವರು ಆನ್ಲೈನ್ ಮೂಲಕವೇ ಸೇವಾ ಪ್ರಸಾದವನ್ನು ಮನೆ ಬಾಗಿಲಿಗೆ ಅಂಚೆ ಮೂಲಕ ಪಡೆಯಬಹುದಾಗಿದೆ. ಈ ಸೇವೆಗಳು ರೂ.50ಕ್ಕಿಂತ ಹೆಚ್ಚಿನ ಮೊತ್ತದ್ದಾಗಿರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.