ಇದೇ ಸೆಪ್ಟಂಬರ್ 7 ರಿಂದ 9ರವರೆಗೆ ಅಮೆರಿಕಾದ ಚಿಕಾಗೋ ನಗರದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಜರಗುತ್ತಿದೆ. ಸುಮಾರು 80 ದೇಶಗಳಿಂದ 25 ಸಾವಿರ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಮುಖ ಭಾಷಣ ಮಾಡಲಿದ್ದಾರೆ. ಸುಮಾರು 250 ಮಂದಿ ಪ್ರಮುಖರು ಮಾತನಾಡಲಿದ್ದಾರೆ. ಹಿಂದೂಗಳ ಕಷ್ಟ ಸುಖಗಳಿಗೆ ಸ್ಪಂದಿಸುವುದು ಹಾಗೂ ಎಲ್ಲೇ ಇದ್ದರೂ ಹಿಂದೂಗಳು ಒಂದೇ ಎಂದು ಸಾರುವುದು ಸಮಾವೇಶದ ಮುಖ್ಯ ಉದ್ದೇಶ. ಆರ್ಥಿಕತೆ, ಶಿಕ್ಷಣ, ಮಾಧ್ಯಮ, ಸಂಘಟನೆ, ರಾಜಕೀಯ, ಮಹಿಳಾ ಸಮಸ್ಯೆ, ಯುವ ಜನತೆಯ ಕುರಿತಾದ ವಿಚಾರ ಚರ್ಚೆಯಾಗಲಿದೆ.
ಈ ವಿಶ್ವ ಹಿಂದೂ ಕಾಂಗ್ರೆಸ್ನ್ನು ಯಾಕೆ ಯಶಸ್ವಿಪಡಿಸಬೇಕು ಎಂಬುದಕ್ಕೆ ಇಲ್ಲಿ 5 ಕಾರಣಗಳನ್ನು ನೀಡಲಾಗಿದೆ
1. ಇದೇ ಮೊದಲ ಬಾರಿಗೆ ಹಿಂದೂ ಜಾಗತಿಕ ವೇದಿಕೆಯನ್ನು ಪಡೆಯಲಿದ್ದಾರೆ
ಕ್ರಿಶ್ಚಿಯನ್ ಮತ್ತು ಮುಸ್ಲಿಂರ ಬಳಿಕ ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ಹಿಂದೂಗಳು. ಮುಸ್ಲಿಮರಿಗೆ 45 ಇಸ್ಲಾಂ ರಾಷ್ಟ್ರಗಳ ಬೆಂಬಲವುಳ್ಳ ’ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೋ-ಅಪರೇಶನ್’ ಎಂಬ ಶಕ್ತಿಶಾಲಿ ವೇದಿಕೆಯಿದೆ. ಕ್ರಿಶ್ಚಿಯನ್ನರಿಗೆ ‘ಕ್ರಿಶ್ಚಿಯನ್ ಎಕನಾಮಿಕ್ ಫೋರಂ’ ಇದೆ. ಆದರೆ ಹಿಂದೂಗಳಿಗೆ ತಾವು ಎದುರಿಸುತ್ತಿರುವ ಜಾಗತಿಕ ಸಮಸ್ಯೆಯನ್ನು ಚರ್ಚಿಸಲು ಯಾವುದೇ ವೇದಿಕೆ ಇಲ್ಲ. ವಿಶ್ವ ಹಿಂದೂ ಕಾಂಗ್ರೆಸ್ಗೆ 50 ರಾಷ್ಟ್ರಗಳ 250 ಚಿಂತನ ನಾಯಕರು ಮತ್ತು 2200 ನಿಯೋಗ ಬರಲಿದ್ದು, ಹಿಂದೂ ಎಕನಾಮಿಕ್ ಫೋರಂ, ಹಿಂದೂ ಎಜುಕೇಶನಲ್ ಕಾನ್ಫರೆನ್ಸ್, ಮಹಿಳಾ ಫೋರಂ ಅಭಿವೃದ್ಧಿಗೆ ಇಂಬು ನೀಡಲಿದೆ.
2. ಧರ್ಮ ಆರ್ಥಿಕತೆಯ ಪ್ರಭಾವಶಾಲಿ ನಾನ್ ಸ್ಟೇಟ್ ಪ್ಲೇಯರ್
ವಿಶ್ವ ಆರ್ಥಿಕತೆಯನ್ನು ರೂಪಿಸುವಲ್ಲಿ ನಾನ್ ಸ್ಟೇಟ್ ಪ್ಲೇಯರ್ಸ್ಗಳು ಪ್ರಭಾವಶಾಲಿ ಅಂಶವಾಗಿರುತ್ತಾರೆ. ಜನರನ್ನು ಬಲಪಡಿಸಲು ಮತ್ತು ರಚನಾತ್ಮಕ ಆರ್ಥಿಕ ಅಭಿವೃದ್ಧಿಗೆ ಧರ್ಮ ಬಲಿಷ್ಠ ಅಂತರ್-ರಾಷ್ಟ್ರೀಯ ಆಯಾಮವಾಗಿದೆ. ವಿಶ್ವ ಆರ್ಥಿಕ ಫೋರಂನ ಕಲಂ ಹೇಳುವಂತೆ ‘ಧರ್ಮ ವಾರ್ಷಿಕವಾಗಿ 1.2 ಟ್ರಿಲಿಯನ್ ಡಾಲರ್ನ್ನು ಆಮೆರಿಕಾದ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ಇದರ ಪೈಕಿ 4.8 ಬಿಲಿಯನ್ ಡಾಲರ್ಗಳು ಧಾರ್ಮಿಕ ಸಮ್ಮೇಳನಗಳಿಂದ, 303 ಡಾಲರ್ ಯೂನಿವರ್ಸಿಟಿ, ಚಾರಿಟಿ, ಆರೋಗ್ಯ ವ್ಯವಸ್ಥೆ ಮುಂತಾದ ಧಾರ್ಮಿಕ ಸಂಸ್ಥೆಗಳಿಂದ, 437 ಡಾಲರ್ ನಂಬಿಕೆ ಆಧಾರಿತ ವ್ಯವಹಾರಗಳಿಂದಾಗಿ ಬರುತ್ತದೆ. ಅಂತಾರಾಷ್ಟ್ರೀತವಾಗಿ, 8 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ವ್ಯಾಟಿಕನ್ ಬ್ಯಾಂಕ್ ಜಾಗತಿಕ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಪರ ಪ್ರಭಾವಶಾಲಿ ಪಾತ್ರ ನಿಭಾಯಿಸುತ್ತದೆ.
ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೋ-ಅಪರೇಶನ್ ಕೂಡ ಇಸ್ಲಾಮಿಕ್ ರಾಷ್ಟ್ರಗಳ ಬೆಂಬಲದೊಂದಿಗೆ ಪ್ರಭಾವಶಾಲಿ ಪಾತ್ರ ನಿಭಾಯಿಸುತ್ತದೆ. ಆದರೆ ಈ ಉದ್ದೇಶಗಳಿಗಾಗಿ ಹಿಂದೂ ಫೋರಂ ಇಲ್ಲ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಸ್ವಾಗತಾರ್ಹ ಹೆಜ್ಜೆಯಾಗಿದೆ. ಜಾಗತಿಕ ಹಿಂದೂ ಅನಿವಾಸಿಗಳಲ್ಲಿ ಹೆಚ್ಚಿನವರು ಉದ್ಯಮಿಗಳು, ಇಂತಹ ಫೋರಂಗಳ ಬೆಂಬಲದೊಂದಿಗೆ ಇವರು ಆಯಾ ರಾಷ್ಟ್ರಗಳ ಆರ್ಥಿಕತೆಗೆ ಹೆಚ್ಚಿನ ಕೊಡುಗೆಗಳನ್ನು ನೀಡಲು ಸಹಕಾರಿಯಾಗುತ್ತದೆ.
3. ರಾಜಕೀಯ ಫೋರಂಗೆ ವೇದಿಕೆ
ಇದೇ ಮೊದಲ ಬಾರಿಗೆ, 4-5 ರಾಷ್ಟ್ರಗಳ ರಾಜಕೀಯ ಪ್ರತಿನಿಧಿಗಳು ವಿಶ್ವ ಹಿಂದೂ ಕಾಂಗ್ರೆಸ್ನಲ್ಲಿ ಭಾಗಿಯಾಗುತ್ತಿದ್ದಾರೆ, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ಹಿಂದೆ 2016ರ ಸೆ.4ರಂದು ಪೋಪ್ ಮದರ್ ಥೆರೇಸಾ ಅವರನ್ನು ಕನೊನೈಝ್ ಮಾಡಿದಾಗ, 13 ಸರ್ಕಾರಗಳ ಮುಖಂಡರು ಭಾಗಿಯಾಗಿದ್ದರು. 90 ಸರ್ಕಾರಗಳು ತಮ್ಮ ಪ್ರತಿನಿಧಿಯನ್ನು ಕಳುಹಿಸಿಕೊಟ್ಟಿದ್ದವು.
ರೋಹಿಂಗ್ಯಾ ವಿಷಯದ ಬಗ್ಗೆ ಚರ್ಚಿಸಲು ವಿಶ್ವ ಹಿಂದೂ ಕಾಂಗ್ರೆಸ್ನಲ್ಲಿ ವಿಶೇಷ ಸೆಷನ್ ನಡೆಸಲಾಗುತ್ತಿದೆ. ಅಂದಾಜು 60ರಿಂದ 70 ಮಿಲಿಯನ್ ಹಿಂದೂಗಳು ಭಾರತದ ಹೊರಗೆ 45 ರಾಷ್ಟ್ರಗಳಲ್ಲಿ ಬದುಕುತ್ತಿದ್ದಾರೆ. ನೇಪಾಳ, ಬಾಂಗ್ಲಾ, ಭಾರತ ಇಂಡೋನೇಷ್ಯಾ, ಪಾಕಿಸ್ಥಾನ, ಶ್ರೀಲಂಕಾ, ಮಲೇಷ್ಯಾ, ಯುಕೆ, ಯುಎಸ್, ಮಯನ್ಮಾರ್, ಕೆನಡಾ, ಮಾರಿಷಿಯಸ್, ಶ್ರೀಲಂಕಾ, ಫಿಜಿ, ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ಈ 15 ರಾಷ್ಟ್ರಗಳಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು 500000ಕ್ಕೂ ಹೆಚ್ಚಿದೆ. ತಮ್ಮ ತಮ್ಮ ದೇಶಗಳಲ್ಲಿ ಇವರು ರಾಜಕೀಯ, ನಾಗರಿಕ ಹಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಚರ್ಚೆಗೆ ರಾಜಕೀಯ ಫೋರಂ ಬೇಕೆಂಬುದು ಇವರ ಧೀರ್ಘಕಾಲದ ಬೇಡಿಕೆ, ಬೇಡಿಕೆ ಈಡೇರಿಕೆಗೆ ಈಗಲೂ ಕಾಲ ಮಿಂಚಿಲ್ಲ.
4. ಹಿಂದೂಗಳಿಗೆ ಪ್ರತ್ಯೇಕ ಗುರುತಿಸುವಿಕೆಯ ಅಗತ್ಯವಿದೆ
ವಲಸೆ, ಅಕ್ರಮ-ಸಕ್ರಮ ಮುಂತಾದ ವಿಷಯಗಳಿಂದಾಗಿ ಯುರೋಪ್ ಮತ್ತು ಯುಎಸ್ಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ಕ್ಷಿಪ್ರವಾಗಿ ವಿಂಗಡನೆಯಾಗುತ್ತಿದೆ, ಇಸ್ಲಾಮಿಕ್ ಭಯೋತ್ಪಾದನೆಯ ಹಿನ್ನಲೆಯಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ. PEW ರಿಸರ್ಚ್ ಹೇಳುವಂತೆ, ಮುಂಬರುವ ದಶಕಗಳಲ್ಲಿ ಅತ್ಯಧಿಕ ಪ್ರಮಾಣದ ಹಿಂದೂಗಳು ಯುರೋಪ್ ಮತ್ತು ಯುಎಸ್ಗೆ ವಲಸೆ ಹೋಗಲಿದ್ದಾರೆ.
ಹೀಗಾಗಿ ಇಂದು ಹಿಂದೂಗಳು ತಮ್ಮ ವಿಭಿನ್ನ ಗುರುತಿಸುವಿಕೆ ಮತ್ತು ಇತಿಹಾಸವನ್ನು ಬಿಂಬಿಸುವುದು, ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಸಾಮ್ರಾಜ್ಯ ವಿಸ್ತರಣೆಗೆ ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಿದ ಇತಿಹಾಸದಲ್ಲಿ ಹಿಂದೂಗಳು ಇಲ್ಲವೇ ಇಲ್ಲ. ಹಿಂದೂಗಳು ಇತರರನ್ನು ಜೀತದಾಳುಗಳನ್ನಾಗಿ ಮಾಡಿಲ್ಲ. ಇತರ ಧರ್ಮೀಯರನ್ನು ಮತಾಂತರಮಾಡಿದವರಲ್ಲ, ತಾವಿದ್ದ ದೇಶದ ಜನರೊಂದಿಗೆ ಅವರು ಶಾಂತಿಯುತ ಮತ್ತು ಪರಸ್ಪರ ಸಹಕಾರಯುತ ಸಂಬಂಧವನ್ನು ಇಟ್ಟುಕೊಂಡಿದ್ದಾರೆ, ಜೀವನದ ವಿವಿಧ ಸ್ಥರಗಳಲ್ಲಿ ನೈತಿಕ ಮೌಲ್ಯವನ್ನು ತುಂಬಿಸಿ ಅವರ ಜೀವನವನ್ನು ಸಮೃದ್ಧಿಗೊಳಿಸಿದ್ದಾರೆ.
5. 125 ವರ್ಷಗಳ ಬಳಿಕ ವಿಶ್ವ ಪ್ರೀತಿಯ ಸಂದೇಶ ನೀಡುವ ಸಮಯ ಬಂದಿದೆ
ಸ್ವಾಮಿ ವಿವೇಕಾನಂದರು ಧರ್ಮ ಮತ್ತು ರಾಷ್ಟ್ರಗಳ ನಡುವೆ ವಿಶ್ವ ಪ್ರೇಮ ಮತ್ತು ಶಾಂತಿಯ ಸಂದೇಶವನ್ನು ನೀಡುವ ಮೂಲಕ ವಿಲಕ್ಷಣತೆಯ ವಿರುದ್ಧದ ಅಸಾಧಾರಣ ವ್ಯಕ್ತಿತ್ವವಾಗಿ ಪ್ರಭಾವ ಬೀರಿದರು.ದೇಶವಾಗಿ ಭಾರತ ಅಂದು ಜರ್ಜರಿತ ಸ್ಥಿತಿಯಲ್ಲಿತ್ತು. ಅವರ ಭಾಷಣದ ಬಳಿಕದ 100 ವರ್ಷಗಳ ಇತಿಹಾಸದಲ್ಲಿ ಭಾರತ ಪುನರುತ್ಥಾನದ ಹಾದಿಯಲ್ಲಿ ಸಾಗಿದೆ ಮತ್ತು ಜಾಗತಿಕ ಹಿಂದೂ ವೇದಿಕೆಯ ಮೂಲಕ ಭವಿಷ್ಯದಲ್ಲಿ ಅದು ತನ್ನ ಸಂದೇಶವನ್ನು ಸಮಗ್ರವಾಗಿ, ಪ್ರಭಾವಿಯಾಗಿ ಸಾರಲು ಸಮರ್ಥವಾಗಲಿದೆ. ಚಿಕಾಗೋವನ್ನು ಆಯ್ಕೆ ಮಾಡಿಕೊಂಡಿರುವುದು ಕೇವಲ ಸಾಂಕೇತಿಕವಾಗಿಯಲ್ಲ, ಮತ್ತೊಮ್ಮೆ ಈ ಕ್ಷೇತ್ರ, ಸಮ್ಮೇಳನದಲ್ಲಿ ಹೊರಹೊಮ್ಮುವ ವಿಶ್ವ ಶಾಂತಿಯ ಆಶೋತ್ತರಗಳ ಘೋಷಣಾ ಕೇಂದ್ರವಾಗಲಿ ಎಂಬ ಕಾರಣಕ್ಕೆ.
ಸಮ್ಮೇಳನದ ಹೆಚ್ಚಿನ ಮಾಹಿತಿಗಳಿಗೆ whc2018.worldhinducongress.org ಕ್ಲಿಕ್ಕಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.