ಮಂಗಳೂರು: ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ಗಳಲ್ಲಿ ಹಿಂದೂ ದೇವರ ಚಿತ್ರ ಬಳಸಲಾಗಿದ್ದು, ಈ ಪೋಸ್ಟರ್ಗಳನ್ನು ಹಿಂಪಡೆಯಬೇಕು. ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಕ್ಷಮೆಯಾಚಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಸರಕಾರ ಪ್ರಚಾರಕ್ಕೆ ಹಿಂದೂ ದೇವರ ಚಿತ್ರಗಳನ್ನೇ ಬಳಸಿ ಅವಮಾನ ಮಾಡುತ್ತಿದೆ. ಯಾವುದೇ ದೇವರನ್ನು ಅವಮಾನಿಸುವುದು ಸರಿಯಲ್ಲ. ಅದು ಸಂವಿಧಾನದಲ್ಲಿಯೂ ಇಲ್ಲ. ಆದರೆ ನರಸಿಂಹ ದೇವರ ಚಿತ್ರವನ್ನು ಬಳಸಿ ಅವಮಾನ ಮಾಡುತ್ತಿದೆ ಎಂದರು.
ಅಲ್ಪಸಂಖ್ಯಾತರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಸರಕಾರ, ಇತರ ಧರ್ಮಗಳನ್ನು ಕಡೆಗಣಿಸುತ್ತದೆ. 1983ರಿಂದ 2015ರ ವರೆಗೆ ಅಲ್ಪಸಂಖ್ಯಾತರ ಆಯೋಗದಲ್ಲಿ ಈವರೆಗೆ 16 ಮಂದಿ ಮುಸ್ಲಿಮರೇ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತರ ಕಚೇರಿಯಲ್ಲಿ ಮಾಹಿತಿ ಹಾಗೂ ಲೆಟರ್ ಹೆಡ್ಗಳನ್ನು ಉರ್ದು ಭಾಷೆಯಲ್ಲಿ ಮುದ್ರಿಸುವ ಮೂಲಕ ಇತರರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತಿರುವ ಹಣವನ್ನು ಮುಸ್ಲಿಮರಿಗೆ ವ್ಯಯ ಮಾಡಲಾಗುತ್ತಿದೆ. ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಉಪಯೋಗಿಸುತ್ತಿರುವ ಕುರಿತು ಸಂಶಯಗಳಿವೆ. ಅದರ ಪೂರ್ಣ ಮಾಹಿತಿ ಪಡೆಯಲಾಗುವುದು. ಅಲ್ಪಸಂಖ್ಯಾತ ನಾಯಕರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.