ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಟಾಲ್ ಕಟೋರ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಇದರೊಂದಿಗೆ ಪ್ರಧಾನಿ ಮೋದಿಯವರೂ ಕೂಡ ಐಪಿಪಿಬಿ ಖಾತೆಯನ್ನು ತೆರೆದರು ಈ ವೇಳೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಪ್ರಧಾನಿಯವರಿಗೆ ಅವರ ಕ್ಯೂಆರ್ ಕಾರ್ಡ್ನ್ನು ಹಸ್ತಾಂತರಿಸಿದರು. ಅಂಚೆ ಕಛೇರಿಗಳ ಮೂಲಕ ಈ ಬ್ಯಾಂಕ್ ಗ್ರಾಮೀಣ ಭಾಗ ಸೇರಿದಂತೆ ದೇಶದಾದ್ಯಂತದ ಜನರಿಗೆ ಹಣಕಾಸು ಸೇವೆ ಒದಗಿಸುವ ಯೋಜನೆ ಇದಾಗಿದೆ.
ನಮ್ಮ ಸರ್ಕಾರ Reform, Perform and Transform ಪ್ರಕ್ರಿಯೆಗಳನ್ನು ತರುತ್ತಿದೆ. ಅಂಚೆ ಇಲಾಖೆಗೆ ಸವಾಲಾಗಿದ್ದ ತಂತ್ರಜ್ಞಾನದ ಸವಾಲನ್ನು ನಾವು ಅವಕಾಶವಾಗಿ ಪರಿವರ್ತಿಸಿಕೊಂಡು ಅದೇ ತಂತ್ರಜ್ಞಾನದಿಂದ ಇಂದು ಐಪಿಪಿಬಿ ತಲೆಯೆತ್ತಿದೆ, ಎಂದು ಪ್ರಧಾನಿ ಹೇಳಿದರು. ಈ ಯೋಜನೆಯ ಮೂಲಕ ನಾವು ದೇಶದ ಪ್ರತಿ ಗ್ರಾಮಗಳ ಬಡವರ ಮನೆಯ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ನಂತರ ಈವರೆಗೆ ಅಂದರೆ ಕಳೆದ 70 ವರ್ಷಗಳ ನಂತರ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ಬ್ಯಾಂಕ್ ಸೇವೆಯ ವ್ಯವಸ್ಥೆ ಇರುವುದು ಕೇವಲ 49000 ಮಾತ್ರ! ಆದರೆ ಐಪಿಪಿಬಿ ಗಳಿಂದಾಗಿ ಮುಂದಿನ ದಿನಗಳಲ್ಲಿ ಅದು 1.55 ಲಕ್ಷಕ್ಕೆ ಏರಲಿದೆ.
ಪೇಮೆಂಟ್ ಬ್ಯಾಂಕ್ಗೆ 2018ರ ಅಂತ್ಯದೊಳಗೆ ದೇಶದ 1.55 ಲಕ್ಷ ಪೋಸ್ಟ್ ಆಫೀಸ್ಗಳು ಲಿಂಕ್ ಆಗಲಿದೆ. ಪೋಸ್ಟ್ ಮ್ಯಾನ್ಗಳು ಮನೆ ಬಾಗಿಲಿಗೆ ಬಂದು ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಿದ್ದಾರೆ. ಪೇಮೆಂಟ್ ಬ್ಯಾಂಕ್ ವ್ಯಕ್ತಿ ಮತ್ತು ಸಣ್ಣ ಸಂಸ್ಥೆಗಳಿಂದ ರೂ.1ಲಕ್ಷದವರೆಗೆ ಡಿಪೋಸಿಟ್ಗಳನ್ನು ಸ್ವೀಕರಿಸಲಿದೆ.
ಪ್ರಸ್ತುತ 650 ಬ್ರಾಂಚ್ಗಳು ಕಾರ್ಯನಿರ್ವಹಿಸಲಿದ್ದು, 3,250 ಎಕ್ಸೆಸ್ ಪಾಯಿಂಟ್ಗಳನ್ನು ಹೊಂದಲಿದೆ. ಇದು ದೇಶದಲ್ಲಿರುವ 1.55 ಲಕ್ಷ ಪೋಸ್ಟ್ ಆಫೀಸ್ಗಳ ಮೂಲಕ ಬ್ಯಾಂಕಿಂಗ್ ಸೇವೆಯನ್ನು ದೇಶದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಜನರಿಗೆ ಸಹಾಯವಾಗಲೆಂದು ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.