ಬೆಂಗಳೂರು: ಭಾರತದ ಟೆಕ್ನೋಲಾಜಿಕಲ್ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಸೆ.6ರಿಂದ 8ರವರೆಗೆ 6ನೇ ’ಸ್ಪೇಸ್ ಎಕ್ಸ್ಪೋ’ ಆಯೋಜನೆಗೊಳ್ಳುತ್ತಿದೆ.
ಉದ್ಯಮ ಅವಕಾಶಗಳನ್ನು ಅನ್ವೇಷಿಸುವುದಕ್ಕಾಗಿ ವಿವಿಧ ದೇಶಗಳ ಕೈಗಾರಿಕ ಮತ್ತು ಸ್ಪೇಸ್ ಎಜೆನ್ಸಿಗಳನ್ನು ಒಂದೇ ವೇದಿಕೆಯಡಿ ತರುವ ಕಾರ್ಯವನ್ನು ಈ ಸ್ಪೇಸ್ ಎಕ್ಸ್ಪೋ ಮಾಡಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಾಣಿಜ್ಯ ಅಂಗ ಆಂಟ್ರಿಕ್ಸ್ ಕಾರ್ಪೋರೇಶನ್ ಈ ಎಕ್ಸ್ಪೋವನ್ನು ಆಯೋಜನೆಗೊಳಿಸುತ್ತಿದೆ.
ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಭಾಗಿದಾರರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಉದ್ಯಮ ಅವಕಾಶಗಳನ್ನು ಅನ್ವೇಷಿಸುವುದು ಅನಿವಾರ್ಯವಾಗಿದೆ ಎಂದು ಆಂಟ್ರಿಕ್ಸ್ ಕಾರ್ಪೋರೇಶನ್ ನಿರ್ದೇಶಕ ಎಸ್.ರಾಕೇಶ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.