ನವದೆಹಲಿ: ಭಾರತೀಯ ರೈಲ್ವೇ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿದೆ. ಈಗಾಗಲೇ ದೇಶದ ಮೊತ್ತ ಮೊದಲ ಇಂಟೆಲಿಜೆಂಟ್ ಸ್ಮಾರ್ಟ್ ಕೋಚ್ಗಳು ಅನಾವರಣಗೊಂಡಿವೆ. ಇದರಿಂದ ಪ್ರಯಾಣ ಮತ್ತಷ್ಟು ಸುರಕ್ಷಿತ ಮತ್ತು ಆರಾಮದಾಯಕವಾಗುತ್ತಿದೆ.
ಇಂಟೆಲಿಜೆಂಟ್ ಸೆನ್ಸಾರ್ ಆಧಾರಿತ ವ್ಯವಸ್ಥೆಯ ಮೂಲಕ ಸ್ಮಾರ್ಟ್ ಕೋಚ್ಗಳು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಇದರ ಮುಖೇನ ರೈಲ್ವೇಯು ನಿರ್ಬಂಧಕ ನಿರ್ವಹಣೆಯಿಂದ ಭವಿಷ್ಯಸೂಚಕ ನಿರ್ವಹಣೆಯತ್ತ ಹೊರಳುವ ಆಶಯವನ್ನು ಹೊಂದಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ರಾಯ್ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿಯು ಈ ಸ್ಮಾರ್ಟ್ ಕೋಚ್ಗಳನ್ನು ತಯಾರು ಮಾಡಿದೆ. ಸೆನ್ಸಾರ್, ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಎಲ್ಲಾ ಸೆನ್ಸಾರ್ನ್ನು ಮಾನಿಟರ್ ಮಾಡುತ್ತದೆ.
ಮೊದಲ ಸ್ಮಾರ್ಟ್ ಕೋಚ್ಗಳನ್ನು ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಪರಿಶೀಲನೆ ನಡೆಸಿದ್ದು, ಇನ್ನೂ 100 ಸ್ಮಾಟ್ ಕೋಚ್ಗಳು ಶೀಘ್ರದಲ್ಲೇ ತಯಾರಾಗಲಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.