ನವದೆಹಲಿ: ದೇಶಕ್ಕೆ ಅಪಾಯಕಾರಿಗಳಾಗಿರುವ ಭಯೋತ್ಪಾದಕರು ಮತ್ತು ನಕ್ಸಲರು ಒಂದಾದರೆ ನಮ್ಮ ದೇಶದ ಭದ್ರತೆಯ ಗತಿ ಏನಾಗಬಹುದು? ಹೌದು, ಇಂತಹದ್ದೊಂದು ಭಯ ಎಲ್ಲರನ್ನೂ ಕಾಡುತ್ತಿದೆ. ಈ ಭಯಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಹ ಮಾಹಿತಿಯನ್ನು ಹೊರ ಹಾಕಿದೆ ಗುಪ್ತಚರ ಇಲಾಖೆ.
ಹೋರಾಟಗಾರರ ಸೋಗಿನಲ್ಲಿರುವ ನಕ್ಸಲ್ ಬೆಂಬಲಿಗರು ಸಿಪಿಐ-ಎಂ ಮಾವೋವಾದಿ ಮತ್ತು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಕೆಲವು ಭಯೋತ್ಪಾದಕ ಸಂಘಟನೆಗಳ ನಡುವೆ ನೇರ ಸಂಪರ್ಕ ಕೊಂಡಿಯನ್ನು ಏರ್ಪಡಿಸಲು ಪ್ರಯತ್ನಪಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಹಲವು ಸಮಯಗಳಿಂದ ನಗರ ನಕ್ಸಲರು ಉಗ್ರರು ಮತ್ತು ನಕ್ಸಲರ ನಡುವೆ ಆತ್ಮೀಯ ಸಂಪರ್ಕ ಕೊಂಡಿ ಸೃಷ್ಟಿಸಲು ಪ್ರಯತ್ನಪಡುತ್ತಲೇ ಇದ್ದಾರೆ ಎಂದಿದೆ.
ಕಾಶ್ಮೀರದಲ್ಲಿ ಲಭ್ಯವಾಗಿರುವ ವಿವಿಧ ಮೂಲಗಳಿಂದ ಮತ್ತು ಭಿಮಾ ಕೋರೆಗಾಂವ್ ಪ್ರಕರಣದಲ್ಲಿ ದೊರೆತ ಕೆಲವೊಂದು ಮಾಹಿತಿಗಳಿಂದ ಈ ವಿಷಯ ತಿಳಿದು ಬಂದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.