ನವದೆಹಲಿ: ಹಿರಿಯ ರಾಜತಂತ್ರಜ್ಞೆ ರುಚಿ ಘನಶ್ಯಾಮ್ ಅವರು ಯುಕೆಗೆ ಭಾರತದ ನೂತನ ಹೈಕಮಿಷನರ್ ಆಗಿ ನೇಮಕವಾಗಿದ್ದಾರೆ. ಅವರ ನೇಮಕವನ್ನು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
2016ರ ಡಿಸೆಂಬರ್ನಿಂದ ಯುಕೆಗೆ ಭಾರತದ ಹೈಕಮಿಷನರ್ ಆಗಿರುವ ವೈಕೆ ಸಿನ್ಹಾ ಅವರ ಉತ್ತರಾಧಿಕಾರಿಯಾಗಿ ರುಚಿ ಅವರ ನೇಮಕವಾಗಿದೆ.
1982ರ ಬ್ಯಾಚ್ನ ಇಂಡಿಯನ್ ಫಾರಿನ್ ಸರ್ವಿಸ್(ಐಎಫ್ಎಸ್) ಅಧಿಕಾರಿಯಾಗಿರುವ ರುಚಿ ಅವರು ಪ್ರಸ್ತುತ ದೆಹಲಿ ಕೇಂದ್ರ ಕಛೇರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶೀಘ್ರದಲ್ಲೇ ರುಚಿಯವರು ಯುಕೆ ಭಾರತೀಯ ಹೈಕಮಿಷನರ್ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಯುಕೆ ಯುರೋಪಿಯನ್ ಯೂನಿಯನ್ನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ರುಚಿ ಅವರ ನೇಮಕ ಅತ್ಯಂತ ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.