ನವದೆಹಲಿ: ಎರಡು ದಿನಗಳ ಥಾಯ್ಲೆಂಡ್ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸೋಮವಾರ ಅಲ್ಲಿನ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಅಲ್ಲದೇ ಥಾಯ್ಲೆಂಡ್ ಪ್ರಧಾನಿ ಜನರಲ್ ಚಾನ್-ಒ-ಚಾ ಅವರೊಂದಿಗೂ ಸೀತಾರಾಮನ್ ಸಭೆಯನ್ನು ನಡೆಸಿದರು. ಉಭಯ ದೇಶಗಳ ನಡುವಣ ರಕ್ಷಣಾ ಸಹಕಾರದ ಬಗ್ಗೆ ಉಭಯ ಮುಖಂಡರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವನ್ನು ಆಯೋಜನೆಗೊಳಿಸಿ ಮಿಲಿಟರಿಯಿಂದ ಮಿಲಿಟರಿಗೆ ಸಂಬಂಧ ಅಭಿವೃದ್ಧಿಪಡಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ಪ್ರಸ್ತುತ ಇರುವ ಬಂಡುಕೋರ ವಿರೋಧಿ ಕಾರ್ಯಾಚರಣೆ ’ಮೈತ್ರಿ’ಮತ್ತು ಭಯೋತ್ಪಾದನಾ ವಿರೋಧಿ ಸಮರಾಭ್ಯಾಸವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.