ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನು ತನ್ನ ಸಹೋದರರು ಎಂದು ಪರಿಗಣಿಸಿರುವ ವಾರಣಾಸಿಯ ಮುಸ್ಲಿಂ ಮಹಿಳೆಯೊಬ್ಬರು ಅತ್ಯಂತ ವಿಭಿನ್ನವಾಗಿ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮೋದಿ ಮತ್ತು ಯೋಗಿ ಅವರಿಗೆ ತಾನು ರಾಖಿ ಕಟ್ಟುತ್ತಿರುವ ಮಾದರಿಯ ಚಿತ್ರವನ್ನು ಈಕೆ ಬಿಡಿಸಿದ್ದಾರೆ. ಈ ಮೂಲಕ ಇಬ್ಬರು ಸಹೋದರರಿಗೆ ತಾನು ರಾಖಿ ಕಟ್ಟಿದಷ್ಟೇ ಸಂತೋಷವನ್ನು ಪಡೆದುಕೊಂಡಿದ್ದಾರೆ.
‘ಮೋದಿ ಮತ್ತು ಯೋಗಿಯನ್ನು ಸಂಪರ್ಕಿಸಲು ನನಗೆ ಸಾಧ್ಯವಿಲ್ಲ, ಹೀಗಾಗಿ ಈ ರೀತಿಯಲ್ಲಿ ಅವರಿಗೆ ರಾಖಿಯನ್ನು ಕಟ್ಟಿದ್ದೇನೆ. ಅವರಿಬ್ಬರು ನನ್ನ ಸಹೋದರರು ಎಂದು ನಾನು ಭಾವಿಸಿದ್ದು, ಅವರಿಗೆ ಗೌರವ ಸೂಚಿಸಲು ಈ ಚಿತ್ರ ಬಿಡಿಸಿದ್ದೇನೆ’ ಎಂದು 25 ವರ್ಷದ ನಗ್ಮಾ ಹೇಳಿಕೊಂಡಿದ್ದಾರೆ.
ಈ ಇಬ್ಬರು ಸಹೋದರರು ಮುಸ್ಲಿಂ ಸಹೋದರಿಯರ ಹಕ್ಕುಗಳನ್ನು ರಕ್ಷಣೆ ಮಾಡಲಿದ್ದಾರೆ ಎಂಬ ಬಲವಾದ ನಂಬಿಕೆಯನ್ನು ನಗ್ಮಾ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.