ಶ್ರೀನಗರ: ಎರಡು ತಿಂಗಳುಗಳ ಕಾಲ ನಡೆದ ಅಮರನಾಥ ಯಾತ್ರೆ ಭಾನುವಾರ ಅಂತ್ಯಗೊಂಡಿದೆ. ಈ ಬಾರಿ ದಾಖಲೆ ಎಂಬಂತೆ 2.85 ಲಕ್ಷ ಭಕ್ತರು ಮಂಜಿನಿಂದ ಆವೃತನಾದ ಅಮರನಾಥನ ದರ್ಶನವನ್ನು ಪಡೆದುಕೊಂಡಿದ್ದಾರೆ.
2017ರಲ್ಲಿ 2 ಲಕ್ಷದ 60 ಸಾವಿರ ಯಾತ್ರಿಕರು ಅಮರನಾಥ ದರ್ಶನ ಪಡೆದುಕೊಂಡಿದ್ದರು, ಈ ಬಾರಿ ಆ ಸಂಖ್ಯೆ 2 ಲಕ್ಷ 85 ಸಾವಿರಕ್ಕೆ ಏರಿಕೆಯಾಗಿದೆ.
ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇಗುಲದಲ್ಲಿ ಭಾನುವಾರ ಧಾರ್ಮಿಕ ಪೂಜಾ ಕೈಂಕರ್ಯ, ಮಂತ್ರ ಘೋಷಣೆಗಳ ಮೂಲಕ ಯಾತ್ರೆಯನ್ನು ಸಮಾಪನಗೊಳಿಸಲಾಗಿದೆ. ಜೂನ್ 28ರಂದು ಯಾತ್ರೆ ಆರಂಭಗೊಂಡಿತ್ತು.
ಈ ಬಾರಿ ಅಮರನಾಥ ಯಾತ್ರೆ ಅತ್ಯಂತ ಶಾಂತಿಯುತವಾಗಿ ಜರುಗಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಕಳೆದ ವರ್ಷ ಭಯೋತ್ಪಾದಕರಿಂದ 8 ಮಂದಿ ಯಾತ್ರಿಕರು ಹತರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.