ತಿರುವನಂತಪುರಂ: ಕೇರಳ ಮತ್ತು ಗಲ್ಫ್ ರಾಷ್ಟ್ರಗಳಿಗೆ ಅವಿನಾಭಾವ ಸಂಬಂಧವಿದೆ. ಅತೀ ಹೆಚ್ಚು ಸಂಖ್ಯೆಯ ಕೇರಳಿಗರು ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ಈ ಮೂಲಕ ತಮ್ಮ ಕರ್ಮಭೂಮಿ ಮತ್ತು ಜನ್ಮಭೂಮಿ ಎರಡಕ್ಕೂ ಅಪಾರವಾದ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಇದೇ ಕಾರಣಕ್ಕೆ ಇಂದು ಸಂಕಷ್ಟದಲ್ಲಿರುವ ಕೇರಳಕ್ಕೆ ಯುಎಇ ನೆರೆವಿನ ಹಸ್ತ ನೀಡಿದೆ. ಕೇರಳ ನಮ್ಮ ಯಶೋಗಾಥೆಯ ಪಾಲುದಾರ ಎಂದಿದೆ.
ಯುಎಇ ಅಧ್ಯಕ್ಷ ಶೇಖ್ ಖಲೀಫ ಅವರು, ರಾಷ್ಟ್ರ ತುರ್ತು ಸಮಿತಿಯೊಂದನ್ನು ರಚಿಸಿ ಅದರ ಮೂಲಕ ಕೇರಳದ ಜನತೆಗೆ ನೆರವು ಒದಗಿಸುತ್ತಿದ್ದಾರೆ.
‘ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಸಹಾಯ ಮಾಡುವುದು ನಮ್ಮ ವಿಶೇಷ ಜವಾಬ್ದಾರಿಯಾಗಿದೆ. ಯುಎಇ ಅನೇಕ ಕೇರಳಿಗರಿಗೆ ತವರಾಗಿದೆ’ ಎಂದು ಯುಎಇ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಹೇಳಿದ್ದಾರೆ.
‘ಕೇರಳ ನಮ್ಮ ಯಶೋಗಾಥೆಯ ಭಾಗವಾಗಿದೆ ಮತ್ತು ಮುಂದೆಯೂ ಭಾಗವಾಗಿರುತ್ತದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.