ನವದೆಹಲಿ: 2017-18ರ ಸಾಲಿನಲ್ಲಿ ಭಾರತದ ಆದಾಯ ತೆರಿಗೆ ಸಂಗ್ರಹ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಈ ವರ್ಷದಲ್ಲಿ ರೂ.10.03 ಲಕ್ಷ ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಹೇಳಿದೆ.
2017-18ರ ಸಾಲಿನಲ್ಲಿ ದಾಖಲೆ ಸಂಖ್ಯೆಯ 6.92 ಕೋಟಿ ಐಟಿ ರಿಟರ್ನ್ಸ್ಗಳನ್ನು ಸಲ್ಲಿಸಲಾಗಿದೆ. 2016-17ನೇ ಸಾಲಿನಲ್ಲಿ ಈ ಸಂಖ್ಯೆ 5.61 ಕೋಟಿಯಾಗಿತ್ತು ಎಂದು ಸಿಬಿಡಿಟಿ ಸದಸ್ಯ ಶಾಬ್ರಿ ಭಟ್ಟಸಾಲಿ ಹೇಳಿದ್ದಾರೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ 1.25 ಕೋಟಿ ಹೆಚ್ಚುವರಿ ರಿಟರ್ನ್ಸ್ ಫೈಲ್ಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಈಶಾನ್ಯ ಭಾಗದಲ್ಲಿ 1.89 ಐಟಿ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದಿದ್ದಾರೆ.
ಈಶಾನ್ಯದ 22 ಸ್ಥಳಗಳಲ್ಲಿ ಈಗಾಗಲೇ ‘ಐಕರ್ ಸೇವಾ ಕೇಂದ್ರ’ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.