ನವದೆಹಲಿ: ಕಿಡ್ನಿ ಕಸಿಗಾಗಿ ವಿತ್ತ ಸಚಿವ ಸ್ಥಾನದಿಂದ ವಿರಾಮ ಪಡೆದುಕೊಂಡಿದ್ದ ಅರುಣ್ ಜೇಟ್ಲಿಯವರು ಗುರುವಾರ ತಮ್ಮ ಸ್ಥಾನವನ್ನು ಮತ್ತೆ ಅಲಂಕರಿಸುವ ಸಾಧ್ಯತೆ ಇದೆ.
65 ವರ್ಷದ ಜೇಟ್ಲಿ, ರಾಜ್ಯಸಭಾದ ಬಿಜೆಪಿ ನಾಯಕರಾಗಿದ್ದಾರೆ. ಕಿಡ್ನಿ ಕಸಿಗಾಗಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದುದ್ದರಿಂದ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಸಚಿವ ಪಿಯೂಶ್ ಗೋಯಲ್ ಅವರಿಗೆ ತಾತ್ಕಲಿಕವಾಗಿ ವಿತ್ತ ಖಾತೆಯ ಜವಾಬ್ದಾರಿಯನ್ನು ನೀಡಲಾಗಿತ್ತು.
ಮೇನಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಅವರು ಗುಣಮುಖರಾಗಿದ್ದಾರೆ. ಇತ್ತೀಚಿಗೆ ನಡೆದ ರಾಜ್ಯಸಭಾ ಉಪಸಭಾಪತಿ ಚುನಾವಣೆಯ ವೇಳೆ ಹಾಜರಿದ್ದರು.
ಇವತ್ತಿನಿಂದ ಅವರೇ ವಿತ್ತ ಖಾತೆಯ ಜವಾಬ್ದಾರಿಯನ್ನು ಮರಳಿ ವಹಿಸಿಕೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.