ಬೆಂಗಳೂರು: ‘ವೈ ವೇಸ್ಟ್?’ನ ಸ್ಥಾಪಕಿ ಬೆಂಗಳೂರಿನ ಗರ್ವಿತ ಗುಲ್ಹಾಟಿ ಅವರು 18-23 ವಯಸ್ಸಿನ 60 ಜಾಗತಿಕ ಚೇಂಜ್ಮೇಕರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಝರಿಕ್ ಸ್ವಿಟ್ಜರ್ಲ್ಯಾಂಡ್ಗೆ ಅವರನ್ನು ಆಹ್ವಾನಿಸಲಾಗಿದ್ದು, 42 ರಾಷ್ಟ್ರಗಳ ಪೈಕಿ ಭಾರತವನ್ನು ಇವರು ಪ್ರತಿನಿಧಿಸಲಿದ್ದಾರೆ.
185 ದೇಶಗಳಿಂದ ಬಂದ ಅರ್ಜಿಗಳನ್ನು ಮೂರು ಹಂತಗಳಲ್ಲಿ ಪರಿಶೀಲನೆಗೊಳಪಡಿಸಿ 60 ಮಂದಿಯನ್ನು ಪ್ರತಿಷ್ಠಿತ ‘ಗ್ಲೋಬಲ್ ಚೇಂಜ್ಮೇಕರ್’ ಟೈಟಲ್ಗೆ ಆಯ್ಕೆ ಮಾಡಲಾಗಿದೆ. ಆಯ್ಕೆಗೊಂಡವರು 1 ಸಾವಿರ ಮಂದಿಯನ್ನೊಳಗೊಂಡ ಗ್ಲೋಬಲ್ ಚೇಂಜ್ಮೇಕರ್ ನೆಟ್ವಕ್ಗೆ ಸೇರ್ಪಡೆಗೊಳ್ಳಲಿದ್ದಾರೆ.
ಗರ್ವಿತ ಅವರು ತಮ್ಮ 15ನೇ ವಯಸ್ಸಿನಲ್ಲಿ ‘ವೈ ವೇಸ್ಟ್?’ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ, ಇದರ ಮುಖೇನ ನೀರು ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ change.org/glasshalffull ಮೂಲಕ ಆಕೆ ನಿರಂತರವಾದ ಅಭಿಯಾನಗಳನ್ನು ನಡೆಸುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.