ನವದೆಹಲಿ: ಚೀನಾದೊಂದಿಗಿನ ಭಾರತ ಗಡಿಯನ್ನು ಕಾಯುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಸಿಬ್ಬಂದಿಗೆ ಹುಟ್ಟುಹಬ್ಬದಂದು ಅರ್ಧ ದಿನದ ರಜೆ ನೀಡಲು ನಿರ್ಧರಿಸಲಾಗಿದೆ. ಈ ದಿನ ಅವರು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಬಹುದು, ಮಾತ್ರವಲ್ಲ ಸಮವಸ್ತ್ರ ಧರಿಸದೇ ಇರುವ ಆಯ್ಕೆಯನ್ನೂ ನೀಡಲಾಗಿದೆ.
ಮಹಿಳಾ ಮತ್ತು ಪುರುಷ ಸಿಬ್ಬಂದಿಗಳ ಹುಟ್ಟುಹಬ್ಬವನ್ನು ನೋಟಿಸ್ ಬೋರ್ಡ್ನಲ್ಲಿ ಪ್ರಕಟ ಮಾಡಲಾಗುತ್ತದೆ. ಹಿರಿಯ ಅಧಿಕಾರಿಗಳು ಆ ದಿನ ಅವರನ್ನು ಹೋಗುಚ್ಛ ನೀಡಿ ಅಭಿನಂದಿಸಲಿದ್ದಾರೆ.
ಯೋಧರ ಆತ್ಮಸ್ಥೈರ್ಯ, ಮನೋಬಲವನ್ನು ವೃದ್ಧಿ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಟುಂಬದಿಂದ ವರ್ಷಾನುಗಟ್ಟಲೆ ದೂರವಿರುವ ಅವರ ಹುಟ್ಟು ಹಬ್ಬವನ್ನು ವಿಶೇಷವನ್ನಾಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಎನ್ನಲಾಗಿದೆ.
ಕುಟುಂಬದಿಂದ ದೂರವಿರುವ ಭಾವ ಅವರಿಗೆ ಬರಬಾರದು ಎನ್ನುವ ನಿಟ್ಟಿನಲ್ಲಿ ಯೋಧರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.