ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋ ಸಮೀಪದ ನಗರಕ್ಕೆ ‘ಕಿಚಿಜೊಯಿ’ ಎಂದು ಹೆಸರು ಬಂದಿದ್ದು ಹಿಂದೂ ದೇವತೆಯಾದ ‘ಲಕ್ಷ್ಮೀ’ಯಿಂದ ಎಂದು ಜಪಾನ್ ರಾಯಭಾರಿ ಟಕಯುಕಿ ಕಿಟಗವ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ದಯಾನಂದ ಸಾಗರ್ ಕಾಲೇಜಿನ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಟೋಕಿಯೋ ಸಮೀಪದ ಒಂದು ನಗರವು ಲಕ್ಷ್ಮೀ ದೇಗುಲದ ಮೂಲವನ್ನು ಹೊಂದಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕಿಚಿಯೋಜಿ ಎಂದರೆ ಜಪಾನಿನಲ್ಲಿ ಲಕ್ಷ್ಮೀ ದೇಗುಲವೆಂದು ಅರ್ಥ’ ಎಂದು ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕ ವೃಂದವನ್ನು ಉದ್ದೇಶಿಸಿ ಅವರು ಹೇಳಿದರು.
ಜಪಾನಿನ ಸಂಸ್ಕೃತಿ ಮತ್ತು ಸಮಾಜದ ಮೇಲೆ ಭಾರತೀಯ ಪ್ರಭಾವವನ್ನು ಸ್ಮರಿಸಿದ ಅವರು, ಹಲವರು ಜಪಾನ್ ಮತ್ತು ಭಾರತ ಭಿನ್ನ ಎಂದು ಅಂದುಕೊಳ್ಳುತ್ತಾರೆ, ನಿಜವಾಗಿ ಅದು ತಪ್ಪು, ಹಿಂದೂ ದೇವರಿಗೆ ಅರ್ಪಿತವಾದ ಸಾಕಷ್ಟು ದೇಗುಲಗಳು ಜಪಾನಿನಲ್ಲಿವೆ ಎಂದಿದ್ದಾರೆ.
‘ಸೂರ್ಯ ಉದಯಿಸುವ ರಾಷ್ಟ್ರದ ನೆಲದಲ್ಲಿ ಹಲವಾರು ಹಿಂದೂ ದೇವರುಗಳು ಉಗಮಿಸಿದ್ದಾರೆ, ಅನೇಕ ವರ್ಷಗಳಿಂದ ಹಿಂದೂ ದೇವರುಗಳಿಗೆ ನಾವು ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದೇವೆ’ ಎಂದರು.
ತಮ್ಮ ಅಮೋಘ ಭಾಷಣವನ್ನು ಕನ್ನಡದಲ್ಲಿ ಆರಂಭಿಸುವ ಮೂಲಕ ಟಕಯುಕಿಯವರು ನೆರೆದಿದ್ದ ಜನರ ಮನ್ನಣೆಗೆ ಪಾತ್ರರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.