ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಯೋಜನೆ ಜಸಾಮಾನ್ಯರ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿದೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಈ ಯೋಜನೆಯಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ಇತರ ಕಡೆಗಳಿಗಿಂತ ಜನ್ ಔಷಧಿ ಕೇಂದ್ರಗಳಲ್ಲಿ ಮೆಡಿಸಿನ್ಗಳು ಶೇ.60ರಿಂದ ಶೇ.70ರಷ್ಟು ಕಡಿಮೆ ಬೆಲೆಗೆ ಸಿಗುತ್ತಿವೆ. ದೇಶದಾದ್ಯಂತ ಆಸ್ಪತ್ರೆಗಳ ಸಮೀಪ ಸುಮಾರು 3,700 ಇಂತಹ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಪ್ರತಿ ಕೇಂದ್ರಗಳಲ್ಲೂ ಸುಮಾರು 700 ತರನಾದ ಔಷಧಿಗಳು ಲಭ್ಯವಿದೆ.
ದೀರ್ಘಾವಧಿಯ ಚಿಕಿತ್ಸೆ ಪಡೆಯುತ್ತಿರುವವರು ಔಷಧಿಗೆ ತಿಂಗಳು ತಿಂಗಳು ಅಪಾರ ಮೊತ್ತದ ಹಣವನ್ನು ವ್ಯಯಿಸುವ ಬದಲು ಜನ್ ಔಷಧಿ ಮಳಿಗೆಗಳಿಗೆ ತೆರಳಿದರೆ ಕಡಿಮೆ ಬೆಲೆ ಔಷಧಿ ಪಡೆಯಬಹುದು, ಇದರಿಂದ ಹಣ ಉಳಿತಾಯವಾಗುತ್ತದೆ.
ಪ್ರಧಾನಿಯವರು ಆರಂಭಿಸಿರುವ ಹಲವಾರು ಮಹತ್ವದ ಯೋಜನೆಗಳ ಪೈಕಿ ಜನ್ ಔಷಧಿ ಅತ್ಯಂತ ಬಡವರ ಸ್ನೇಹಿ ಯೋಜನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.