ತಿರುವನಂತಪುರ: ಕಲಿಯಲು ವಯಸ್ಸಿನ ಅಡ್ಡಿಯಿಲ್ಲ, ಮನಸ್ಸು ಮಾಡಿದರೆ ಯಾವುದೇ ವಯಸ್ಸಲ್ಲೂ ಓದು ಬರಹ ಕಲಿತು ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೇರಳದ 96 ವರ್ಷದ ಅಜ್ಜಿ ಕಾತ್ಯಾಯಿನಿ.
4ನೇ ತರಗತಿಯ ಪರೀಕ್ಷೆಯನ್ನು ಇತ್ತೀಚಿಗಷ್ಟೇ ಬರೆದಿರುವ ಅವರಿಗೆ, 10ನೇ ತರಗತಿಯವರೆಗೂ ಕಲಿಯಬೇಕು ಎಂಬ ಅದಮ್ಯ ಆಸೆಯಿದೆ. ಕೇರಳ ಸರ್ಕಾರದ ’ಅಕ್ಷರಂ ಲಕ್ಷಂ’ ಯೋಜನೆಯಡಿ ಇವರು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಈ ಯೋಜನೆಯಡಿ ಹಲವಾರು ವಯಸ್ಕರು ಶಿಕ್ಷಣ ಪಡೆದು ಪರೀಕ್ಷೆ ಬರೆದಿದ್ದು, ಅವರೆಲ್ಲರ ಪೈಕಿ ಕಾತ್ಯಾಯಿನಿ ಹಿರಿಯವರಾಗಿದ್ದಾರೆ. ಬಾಲ್ಯದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಇವರಿಗೆ ಓದಲು ಸಾಧ್ಯವಾಗಿರಲಿಲ್ಲ, ಚಿಕ್ಕ ವಯಸ್ಸಲ್ಲೇ ವಿಧವೆಯಾಗಿ 6 ಮಕ್ಕಳನ್ನು ಮನೆಗೆಲಸ ಮಾಡುತ್ತಾ ಸಾಕಿದ ಹಿರಿಮೆ ಇವರದ್ದು.
ಇವರ ಮಗಳು ಕೆಲ ವರ್ಷಗಳ ಹಿಂದಷ್ಟೆ 10ನೇ ತರಗತಿ ಪರೀಕ್ಷೆ ಬರೆದಿದ್ದರು, ಇದನ್ನು ನೋಡಿ ಇವರೂ ಸ್ಫೂರ್ತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.