ಅಮೇಥಿ: ಉತ್ತರಪ್ರದೇಶದ ಅಮೇಥಿ ಜಿಲ್ಲೆಯಾದ್ಯಂತ ಪೊಲೀಸರು ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 50 ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
ಅಪರಾಧ ತಡೆಗೆ ‘ಆಪರೇಶನ್ ಆಲ್ಔಟ್’ ಆರಂಭಿಸಿರುವ ಅಮೇಥಿ ಪೊಲೀಸರು, ಕೈ ಸಿಕ್ಕದೆ ಸತಾಯಿಸುತ್ತಿದ್ದ ಅಪರಾಧಿಗಳನ್ನು ಕಂಬಿಯ ಹಿಂದೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗಡುಕರು, ವರದಕ್ಷಿಣೆ ಸಂಬಂಧಿ ಹಂತಕರು ಕೂಡ ಇದರಲ್ಲಿ ಸೇರಿದ್ದಾರೆ.
ಒಟ್ಟು 11 ಪೊಲೀಸ್ ಠಾಣೆಗಳು ಒಟ್ಟು 50 ಅಪರಾಧಿಗಳನ್ನು ‘ಆಪರೇಶನ್ ಆಲ್ಔಟ್’ ಮೂಲಕ ಬಂಧಿಸಿವೆ. ಅಲ್ಲದೇ ಇನ್ನೂ ಕೆಲ ಅಪರಾಧಿಗಳನ್ನು ಹಿಡಿಯದ ಪೊಲೀಸ್ ಠಾಣೆಗಳಿಗೆ ವಿವರಣೆಯನ್ನು ಕೋರಿ ಪೊಲೀಸ್ ಮಹಾನಿರ್ದೇಶಕರು ಶೋಕಾಸು ನೋಟಿಸ್ ಜಾರಿಗೊಳಿಸಿದ್ದಾರೆ.
ಅಮೇಥಿಯಾದ್ಯಂತ 14 ಪೊಲೀಸ್ ಠಾಣೆಗಳಿವೆ, ಇದರಲ್ಲಿ ಒಂದು ಮಹಿಳಾ ಪೊಲೀಸ್ ಠಾಣೆ ಇದೆ. ಈ ಠಾಣೆಯಲ್ಲಿ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.