ನವದೆಹಲಿ: ಮತ ನೀಡುವಾಗ ಪೇಪರ್ ಟ್ರಯಲಿಂಗ್ ಮೆಶಿನ್ ನಿಮ್ಮ ಫೋಟೋವನ್ನು ಕ್ಲಿಕ್ಕಿಸುತ್ತದೆ, ಇದರಿಂದಾಗಿ ನೀವು ನಮಗೆ ಮೋಸ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ಕೆಲ ಅಭ್ಯರ್ಥಿಗಳು ಜನರನ್ನು ಬೆದರಿಸುತ್ತಿದ್ದಾರೆ. ಇತಂಹ ಬೆದರಿಕೆಗಳಿಗೆ ಜನರು ಮೋಸ ಹೋಗಬಾರದು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ಪೇಪರ್ ಟ್ರಯಲಿಂಗ್ ಮೆಶಿನ್ ಮತದಾನ ಮಾಡುವವರ ಫೋಟೋವನ್ನು ಕ್ಲಿಕ್ಕಿಸುವುದಿಲ್ಲ, ಯಾವ ಪಕ್ಷದ ಬಟನ್ ಒತ್ತಲಾಗಿದೆ ಎಂಬ ಬಗ್ಗೆ ಬೇರೆಯವರಿಗೆ ತಿಳಿಯಪಡಿಸುವ ವ್ಯವಸ್ಥೆಯೂ ಮೆಶಿನ್ನಲ್ಲಿ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮತದಾರ ತಾನು ಇಂತಹುದೇ ಪಕ್ಷಕ್ಕೆ ಮತ ಹಾಕಿದ್ದೇನೆ ಎಂಬುದನ್ನು ಖಚಿತಪಡಿಸುವುದಕ್ಕಾಗಿ, ಆತನ ನಂಬಿಕೆಯನ್ನು ಹೆಚ್ಚಿಸುವುದಕ್ಕಾಗಿ ಪೇಪರ್ ಟ್ರಯಲಿಂಗ್ ಮೆಶಿನ್ನನ್ನು ಇಡಲಾಗಿದೆ ಎಂದು ಅದು ಹೇಳಿದೆ.
ಮತದಾರರಿಗೆ ಹಣಕೊಟ್ಟು ನೀವು ನಮಗೆಯೇ ಮತ ಹಾಕಬೇಕು, ಮತ ಹಾಕದಿದ್ದರೆ ನಮಗೆ ತಿಳಿಯುತ್ತದೆ ಎನ್ನುವ ಅಭ್ಯರ್ಥಿಗಳ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.