ರಾಯ್ಪುರ: ಛತ್ತೀಸ್ಗಢ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಭಯದ ಕಾರಣಕ್ಕೆ ಯಾವುದೇ ಖಾಸಗಿ ಕಾಂಟ್ರ್ಯಾಕ್ಟರ್ಗಳು ಮುಂದಾಗದ ಹಿನ್ನಲೆಯಲ್ಲಿ ಸ್ವತಃ ಯೋಧರೇ ರಸ್ತೆ ನಿರ್ಮಾಣ ಮಾಡಿದ್ದಾರೆ.
ಸಿಆರ್ಪಿಎಫ್ ಯೋಧರು ಬಸ್ತಾರ್ನಲ್ಲಿ ಆರ್ಟೆರಿಯಲ್ ರೋಡ್ ನಿರ್ಮಾಣ ಮಾಡಿದ್ದಾರೆ. ಬಿಜಾಪುರ ದಕ್ಷಿಣ ಭಾಗ ಭೈರಂಘರ್ ಮತ್ತು ಕೇಶ್ಕುಟುರ್ನ್ನು ಇದು ಸಂಪರ್ಕಿಸುತ್ತದೆ.
ಈ ಪ್ರದೇಶದಲ್ಲಿ ನಕ್ಸಲರ ಉಪಟಳ ಎಲ್ಲೆ ಮೀರಿರುವ ಹಿನ್ನಲೆಯಲ್ಲಿ ಖಾಸಗಿ ಕಾಂಟ್ರ್ಯಾಕ್ಟರ್ಗಳು ರಸ್ತೆ ನಿರ್ಮಿಸಲು ಮುಂದಾಗಿರಲಿಲ್ಲ, ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೇ ಸಿಆರ್ಪಿಎಫ್ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿತು.
2015ರಿಂದ ದಿನಕ್ಕೆ 35-40 ಕಾರ್ಮಿಕರನ್ನು ಬಳಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕಾರ್ಮಿಕರಿಗೆ ಆಹಾರ, ಭದ್ರತೆ ಎಲ್ಲವನ್ನೂ ಯೋಧರೇ ಒದಗಿಸಿದ್ದಾರೆ. ಸೇನೆಯ ಎಂಜಿನಿಯರ್ಗಳು ಇದರಲ್ಲಿ ಕೈಜೋಡಿಸಿದ್ದಾರೆ.
ಯೋಧರಿಂದ ನಿರ್ಮಿತವಾದ ದೇಶದ ಮೊದಲ ರಸ್ತೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.