ಟೌನ್ವನ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ ಅವರು, ಇಂಗ್ಲೆಂಡ್ನ ಟೌನ್ವನ್ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
ವೆಸ್ಟರ್ನ್ ಸ್ಟಾರ್ಮ್ ಪರ ಆಡುತ್ತಿರುವ ಅವರು, 61 ಎಸೆತಗಳಲ್ಲಿ 102 ರನ್ಗಳನ್ನು ಪೇರಿಸುವ ಮೂಲಕ ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಮೃತಿ ಅವರ ಅಬ್ಬರ ಬ್ಯಾಟಿಂಗ್ನ ಸಹಾಯದಿಂದಾಗಿ ವೆಸ್ಟರ್ನ್ ಸ್ಟಾರ್ಮ್ ತಂಡ, ಲಂಕಾಷೈರ್ ಥಂಡರ್ ತಂಡವನ್ನು ಏಳು ವಿಕೆಟ್ನಿಂದ ಪರಾಭವಗೊಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಆರಂಭಿಸಿದ ಥಂಡರ್ ತಂಡ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ವೆಸ್ಟರ್ನ್ ಸ್ಟಾರ್ಮ್ ತಂಡ ಸ್ಮೃತಿ ಅವರ 102 ರನ್ಗಳಿಂದ ನಿರಾಯಾಸ ಗೆಲುವು ಕಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.