ನವದೆಹಲಿ: ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು.
ಈ ವೇಳೆ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನ ತನ್ನ ಯೋಜನೆ ಎಂದು ಮೋದಿ ಸರಕಾರ ಹೇಳುತ್ತಿದೆ. ಅಲ್ಲದೇ ಬಿಜೆಪಿ ಸಂಸದೀಯ ಶಿಷ್ಟಾಚಾರವನ್ನು ಮರೆತಂತಿದೆ ಮತ್ತು ಬಿಜೆಪಿಯಿಂದ ಸಮಾಜ ಮತ್ತು ನಾಯ್ಯಾಂಗ ಧಕ್ಕೆಉಂಟಾಗುತ್ತಿದೆ ಎಂದು ಜರಿದಿದ್ದಾರೆ.
ಅಧಿಕಾರ ಇಂದು ಬಿಜೆಪಿ ಕೈಯಲ್ಲಿರುವುದರಿಂದ ಕೋಮುವಾದದ ಹೇಳಿಕೆ ಕೇಳಿ ಬರುತ್ತಿದ್ದು ಸಂಸದರು ಮತ್ತು ಸಹೋದ್ಯೋಗಿಗಳು ಕೋಮುವಾದದ ಹೇಳಿಕೆ ನೀಡುತ್ತಿದ್ದಾರೆ.
ನೀವು ಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಬೇಕು. ಕಾಂಗ್ರೆಸ್ ಸದಸ್ಯರಾಗಿ ಕೇಂದ್ರ ಸರಕಾರ ಜನ ವಿರೋಧಿ ಕೆಲಸ ಮಾಡಿದರೆ ಅದನ್ನು ಪ್ರತಿಭಟಿಸಿ.
ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ನೀವು ಮಾಡಬೇಕಾಗಿದೆ. ರಾಜ್ಯದಲ್ಲಿ ಏಕತೆ ಮತ್ತು ಒಗ್ಗಟಿನ ಮಂತ್ರಜಪಿಸಿ ಕಾರ್ಯೋನ್ಮುಖರಾಗಿ ಎಂದು ನಾಯಕಿ ಸೋನಿಯಾ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.