ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಯುರೋಪಿಯನ್ ರಾಷ್ಟ್ರಗಳಾದ ನೆದರ್ಲ್ಯಾಂಡ್ ಮತ್ತು ಡೆನ್ಮಾರ್ಕ್ಗಳಿಗಿಂತಲೂ ಅಧಿಕ ಪ್ರಮಾಣದ ನವೀಕರಿಸಬಹುದಾದ ಶಕ್ತಿ ನಮ್ಮ ರಾಜ್ಯದಲ್ಲೇ ಉತ್ಪಾದಿಸಲ್ಪಡುತ್ತಿದೆ ಎಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಡೆನ್ಮಾರ್ಕ್, ನೆದರ್ಲ್ಯಾಂಡ್ಗಳು 7.7 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿ ಉತ್ಪಾದನೆ ಮಾಡಿದರೆ, ನಮ್ಮ ರಾಜ್ಯ 12.3 ಗಿಗಾವ್ಯಾಟ್ ಉತ್ಪಾದನೆ ಮಾಡುತ್ತದೆ.
ಕಳೆದ 12 ತಿಂಗಳಲ್ಲಿ ಕರ್ನಾಟಕವು ತಮಿಳುನಾಡನ್ನು ಹಿಂದಿಕ್ಕಿ ಭಾರತದ ಅತೀದೊಡ್ಡ ನವೀಕರಿಸಬಹುದಾದ ಶಕ್ತಿ ಉತ್ಪಾದಕನಾಗಿ ಹೊರಹೊಮ್ಮಿದ್ದು, 12.3 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 5 ಗಿಗಾವ್ಯಾಟ್ ಸೌರಶಕ್ತಿ, 4.7 ಗಿಗಾವ್ಯಾಟ್ ವಿಂಡ್ ಎನರ್ಜಿ, 2.6ಗಿಗಾವ್ಯಾಟ್ ಹೈಡ್ರೋ, ಬಯೋಮಾಸ್, ಹೀಟ್ ಮತ್ತು ಕೊ-ಜನರೇಶನ್ಗಳನ್ನು ಇದು ಒಳಗೊಂಡಿದೆ.
2013ರಲ್ಲಿ ಕರ್ನಾಟಕ 6.8 ಗಿಗಾವ್ಯಾಟ್ ಕೋಲ್ ಪವರ್ ಸಾಮರ್ಥ್ಯ ಹೊಂದಿತ್ತು, ಇದು ಅದರ ಕ್ಲೀನ್ ಎನರ್ಜಿ ಸಾಮರ್ಥ್ಯ 4 ಗಿಗಾವ್ಯಾಟ್ಗಿಂತ ಹೆಚ್ಚಾಗಿತ್ತು. ಪ್ರಸ್ತುತ ಕರ್ನಾಟಕ 9.8 ಗಿಗಾವ್ಯಾಟ್ ಕೋಲ್ ಪವರ್ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.