ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಅವರು ಲಂಡನ್ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಸೂಪರ್ ಲೀಗ್ನಲ್ಲಿ ಅತೀ ವೇಗದ ಅರ್ಧ ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಸ್ಟಾರ್ ಓಪನರ್ ಎಂದು ಹೆಸರುವಾಸಿಯಾಗಿರುವ ಮಂಧಾನಾ 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ ಈ ಮೂಲಕ ಅತೀ ವೇಗದ ಅರ್ಧ ಶತಕ ಬಾರಿಸಿದ ದಾಖಲೆಯನ್ನು ನ್ಯೂಜಿಲ್ಯಾಂಡ್ನ ಆಟಗಾರ್ತಿ ಸೋಫಿ ಡಿವೈನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಸ್ಮೃತಿ ಮಂಧಾನಾ ಈ ಲೀಗ್ನಲ್ಲಿ ಕಾಣಿಸಿಕೊಂಡಿರುವ ಭಾರತದ ಪ್ರಥಮ ಮಹಿಳಾ ಕ್ರಿಕೆಟರ್. 19 ಎಸೆತಗಳಲ್ಲಿ ಅಜೇಯ 52 ರನ್ಗಳನ್ನು ಬಾರಿಸುವ ಮೂಲಕ ಇವರು ತಮ್ಮ ಇನ್ನಿಂಗ್ಸ್ನ್ನು ಪೂರೈಸಿದ್ದಾರೆ. ಲೀಗ್ನಲ್ಲಿ ಮಂಧಾನಾ ವೆಸ್ಟರ್ನ್ ಸ್ಟಾರ್ಮ್ ತಂಡದ ಪರವಾಗಿ ಆಡುತ್ತಿದ್ದಾರೆ. ಲಾಫ್ಬೊರಫ್ ಲೈಟನಿಂಗ್ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಅತೀ ವೇಗದ ಅರ್ಧ ಶತಕವನ್ನು ಸಿಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.