ನವದೆಹಲಿ: ಎಫ್ಎಂ ಚಾನೆಲ್ಗಳಲ್ಲಿ ನ್ಯೂಸ್ಗಳು ಬಿತ್ತರವಾಗುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಸಾರಕ ‘ಪ್ರಸಾರ ಭಾರತಿ’ ಚಿಂತನೆ ಆರಂಭಿಸಿದ್ದು, ಖಾಸಗಿ ರೇಡಿಯೋ ಸ್ಟೇಶನ್ಗಳೊಂದಿಗೆ ಸೇರಿ ಜಂಟಿ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದ ಸುದ್ದಿಗಳನ್ನು ಪ್ರಸಾರ ಮಾಡಲು ಎಫ್ಎಂಗೆ ಎಷ್ಟು ದರ ವಿಧಿಸಬೇಕು ಎಂಬುದನ್ನು ನಿರ್ಧಾರ ಮಾಡಲಿದೆ.
ಎಫ್ಎಂ ರೇಡಿಯೋಗಳಿಗೆ ಸುದ್ದಿಗಳನ್ನು ಬಿತ್ತರಿಸುವ ಅನುಮತಿ ಇದುವರೆಗೆ ಇಲ್ಲ, ಪ್ರಸಾರ ಭಾರತೀಯ ಸುದ್ದಿ ಬಿತ್ತರ ಮಾಡುವ ಅಂಗ ಎಐಆರ್ ಎಫ್ಎಮ್ಗಳಿಗೆ ಸುದ್ದಿ ಬಿತ್ತರಿಸುವ ಅನುಮತಿ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ಅವುಗಳಿಂದ ಹಣ ಪಡೆಯಲು ಮುಂದಾಗಿದೆ.
ಇದೀಗ ವಿಧಿಸಬೇಕಾದ ದರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಪ್ರಸಾರ ಭಾರತಿ ಸಮಿತಿಯನ್ನು ರಚನೆ ಮಾಡಲು ಮುಂದಾಗಿದೆ. ಆದರೆ ಎಫ್ಎಂ ಸ್ಟೇಶನ್ಗಳಿಗೆ ಉಚಿತವಾಗಿ ಸುದ್ದಿಗಳನ್ನು ನೀಡಬೇಕು ಎಂಬ ವಾದಗಳು ಕೇಳಿ ಬರುತ್ತಿದೆ. ಆದರೆ ದರ ವಿಧಿಸದಿದ್ದರೆ ಎಐಆರ್ನ ಕೇಳುಗರ ಸಂಖ್ಯೆ ಕಡಿಮೆಯಾಗಿ ನಷ್ಟಕ್ಕೀಡಾಗುವ ಆತಂಕ ಇದೆ ಎಂಬ ವಾದವೂ ಇದೆ.
ಎಐಆರ್ ನೀಡುವ ಒರಿಜಿನಲ್ ಫಾರ್ಮೆಟ್ನಲ್ಲಿಯೇ ಸುದ್ದಿಗಳನ್ನು ಬಿತ್ತರ ಮಾಡಬೇಕು, ಅದನ್ನು ತಿರುಚಬಾರದು ಎಂಬ ನಿಯಮವನ್ನೂ ರೂಪಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.