ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳ ರೈತರಿಗೆ ವನ್ಯಜೀವಿಗಳ ಸಮಸ್ಯೆ ತಪ್ಪಿದ್ದಲ್ಲ, ಇವುಗಳಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದೇ ಅವರಿಗೆ ದೊಡ್ಡ ಸಾಹಸವಾಗಿರುತ್ತದೆ. ಬಾಳೆ ಹಣ್ಣು, ಕೋಕ, ತರಕಾರಿ, ಅಡಕೆಗಳಿಗೆ ಹಂದಿ, ಮಂಗಗಳ ಕಾಟ ಹೆಚ್ಚೇ ಇರುತ್ತದೆ.
ಅರಣ್ಯ ಪ್ರದೇಶದಲ್ಲಿ ಟಿಂಬರ್ ಮಾಫಿಯಾದ ಹಾವಳಿಗಳಿಂದ ಹಣ್ಣುಗಳನ್ನು ನೀಡುವ ಮರಗಳ ಸಂಖ್ಯೆ ಕಡಿಮೆಯಾಗಿರುವುದರಿಂದಲೇ ವನ್ಯಜೀವಿಗಳು ರೈತರು ಬೆಳೆದ ಬೆಳೆಗಳತ್ತ ನುಗ್ಗಲು ಕಾರಣ.
ಈ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ನೀಡುವ ಸಲುವಾಗಿ ಮಂಗಳೂರು ಮೂಲದ ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್, ಮೀಸಲು ಅರಣ್ಯದಲ್ಲಿ ಹಣ್ಣು ನೀಡುವ ಗಿಡಮರಗಳನ್ನು ಬೆಳಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಎರಡು ವಾರಗಳ ಹಿಂದೆ ಈ ಯೋಜನೆ ಆರಂಭಗೊಂಡಿದ್ದು, ಈಗಾಗಲೇ ಬೆಳ್ತಂಗಡಿಯ ನಾಡದಲ್ಲಿ 318 ಗಿಡಗಳನ್ನು ನೆಡಲಾಗಿದೆ. ಇಚ್ಲಂಪಾಡಿ, ಮರ್ದಾಲದಲ್ಲಿ 600 ಗಿಡಗಳನ್ನು ನೆಡಲಾಗಿದೆ.
ಭಾನುವಾರ ಈ ಸಂಸ್ಥೆ ಗಿಡ ನೆಡುವ ಕಾರ್ಯವನ್ನು ಆಯೋಜನೆಗೊಳಿಸುತ್ತದೆ, ಇದರ 170 ಕಾರ್ಯಕರ್ತರು, ವಿದ್ಯಾರ್ಥಿಗಳು, ಸ್ಥಳಿಯರು ಸೇರಿ ಗಿಡ ನೆಡುವ ಕಾರ್ಯ ಮಾಡುತ್ತಾರೆ.
ಹಲಸು, ಮಾವು, ಹುಣಸೆ, ಕಾಡು ಹಲಸು, ಬೆಣ್ಣೆ ಹಣ್ಣು, ಜಾಮೂನು ಗಿಡಗಳನ್ನು ಅರಣ್ಯ ಭಾಗಗಳಲ್ಲಿ ಇವರು ನೆಡುತ್ತಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಪ್ರಾಣಿಗಳ ಹಸಿವಿನ ಸಮಸ್ಯೆ, ರೈತರ ಬೆಳೆ ಹಾನಿ ಸಮಸ್ಯೆ ಎರಡಕ್ಕೂ ಪರಿಹಾರ ಸಿಗುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.