ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ, ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ನಿರ್ಮಾಣದ ಕಾರ್ಯ ದುಪ್ಪಟ್ಟಾಗಿದೆ.
2018ರ ಹಣಕಾಸು ವರ್ಷದಲ್ಲಿ ದಿನಕ್ಕೆ 27 ಕಿಲೋ ಮೀಟರ್ ರಸ್ತೆಗಳ ನಿರ್ಮಾಣವಾಗುತ್ತಿದೆ, 2014ಕ್ಕೆ ಹೋಲಿಸಿದರೆ ನಿರ್ಮಾಣದ ಪ್ರಮಾಣ ದುಪ್ಪಟ್ಟಾಗಿದೆ. ಮೋದಿಯವರ ಭಾರತ್ಮಾಲಾ ಯೋಜನೆ ಮುಂಬರುವ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡುವ ನಿರೀಕ್ಷೆ ಇದೆ.
ಎಲ್ಲದಕ್ಕಿಂತಲೂ ಮಿಗಿಲಾಗಿ, ರಸ್ತೆ ನಿರ್ಮಾಣದ ಮೇಲಿನ ಸರ್ಕಾರ ವೆಚ್ಚ, ರಸ್ತೆ ನಿರ್ಮಾಣ ಕಂಪನಿಗಳ ವಾರ್ಷಿಕ ಆದಾಯ ಪ್ರಗತಿಯನ್ನು 2020ರವರೆಗೆ ಶೇ.20ರಷ್ಟು ಉತ್ತೇಜಿಸಲಿದೆ ಎಂದು ರೇಟಿಂಗ್ ಸಂಸ್ಥೆ ಸಿಆರ್ಐಎಸ್ಐಎಲ್ ತನ್ನ ವರದಿಯಲ್ಲಿ ತಿಳಿಸಿದೆ.
ನಿರ್ಮಾಣ ಕಂಪನಿಗಳು ಕಳೆದ ಹಣಕಾಸು ವರ್ಷದಲ್ಲಿ ರೂ.1.3 ಲಕ್ಷ ಕೋಟಿ ಆರ್ಡರ್ ಬುಕ್ ಪಡೆದಿದ್ದು, ಇದು 2018ರ ಹಣಕಾಸು ವರ್ಷದಲ್ಲಿ ತ್ರಿಗುಣವಾಗುವ ನಿರೀಕ್ಷೆ ಇದೆ, ಇದರಿಂದ ಹೆಚ್ಚಿನ ಆದಾಯದ ನಿರೀಕ್ಷೆ ಸ್ಪಷ್ಟವಾಗಿ ಗೋಚರಿಸಿದೆ ಎಂದು ಸಿಆರ್ಐಎಸ್ಐಎಲ್ ನಿರ್ದೇಶಕ ಸಚಿನ್ ಗುಪ್ತಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.