ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿರುವ ದೆಹಲಿ ಎಎಪಿ ಸರ್ಕಾರದ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ವಂಚನೆ, ಫೋರ್ಜರಿ, ಫೇಕ್ ಸರ್ಟಿಫಿಕೇಟ್ ನೀಡಿ ಉದ್ಯೋಗ ಗಳಿಕೆ ಮುಂತಾದ ಆರೋಪಗಳ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ಹೌಝ್ ಖಾಸ್ ಪೊಲೀಸ್ ಸ್ಟೇಶನ್ನಲ್ಲಿ ಇರಿಸಲಾಗಿದೆ.
ಇದೊಂದು ರಾಜಕೀಯ ಪಿತೂರಿ, ನನ್ನ ವಿರುದ್ಧ ಅರೆಸ್ಟ್ ವಾರೆಂಟ್ ಕೂಡ ಜಾರಿಗೊಳಿಸಲಾಗಿಲ್ಲ, ಪೊಲೀಸರು ಬಂದು ನಿಮ್ಮ ಬಳಿ ಮಾತನಾಡಬೇಕಿದೆ ಎಂದು ಹೇಳಿ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತೋಮರ್ ಆರೋಪಿಸಿದ್ದಾರೆ.
ಬಿಹಾರ ಮೂಲದ ತಿಲ್ಕಾ ಮಜಿಹಿ ಬಗಲ್ಪುರ್ ವಿಶ್ವವಿದ್ಯಾನಿಲಯ ತೋಮರ್ ಅವರ ಸರ್ಟಿಫಿಕೇಟ್ ನಕಲಿ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿಯೇ ಪೊಲೀಸರು ತೋಮರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇದು ಕೇಂದ್ರದ ಪಿತೂರಿ ಎಂದು ಎಎಪಿ ಈಗ ಆರೋಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.