ನವದೆಹಲಿ: ಕಾಯಕಕ್ಕೆ ಅತೀವ ಪ್ರಾಮುಖ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರು, ಹಗಲು ರಾತ್ರಿ ಎನ್ನದೆ ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಶನಿವಾರ ತಡ ರಾತ್ರಿ ಜಗತ್ತು ಮಲಗಿದ್ದ ವೇಳೆ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಅವರ ಈ ನಡೆ ಜನರಿಗಾಗಿ ಅವರು ಎಷ್ಟರ ಮಟ್ಟಿಗೆ ಪರಿಶ್ರಮ ಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಕಳೆದ ವಾರ ಎರಡು ದಿನಗಳ ಉತ್ತರಪ್ರದೇಶ ಪ್ರವಾಸಕೈಗೊಂಡಿದ್ದ ಮೋದಿ, ಅಲ್ಲಿ ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು. ಈ ವೇಳೆ ಶನಿವಾರ ರಾತ್ರಿ ವಾರಣಾಸಿಯಲ್ಲಿ ತಂಗಿದ್ದ ಮೋದಿ, ತಡ ರಾತ್ರಿ ಎಲ್ಲರೂ ಮಲಗಿದ ಬಳಿಕ ಸಿಎಂ ಯೋಗಿ ಆದಿತ್ಯನಾಥ ಮತ್ತು ಇತರರೊಂದಿಗೆ ವಾರಣಾಸಿಯ ಬೀದಿ ಬೀದಿಯನ್ನು ಸುತ್ತಾಡಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆಯನ್ನು ನಡೆಸಿದ್ದಾರೆ.
ಪ್ರಧಾನಿ ರಾತ್ರಿ ಹನ್ನೆರಡೂವರೆಯಿಂದ ಬೆಳಗಿನ ಜಾವ ಮೂರುವರೆವರೆಗೆ ಶಿಷ್ಟಾಚಾರವನ್ನು ಬದಿಗೊತ್ತಿ, ಬೆಂಗಾವಲು ಪಡೆಯಿಲ್ಲದೆ ರವೀಂದ್ರ ಪುರಿ, ಸೋನಾಪುರ, ದೋಲಿಯಾ, ಜ್ಞಾನವಾಪಿ ಮುಂತಾದ ಕಡೆ ತೆರಳಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳಿಂದ ಕಾಮಗಾರಿಗಳ ಮಾಹಿತಿ ಪಡೆದಿದ್ದಾರೆ. ವರ ಈ ನಡೆ ಒಂದು ದಿನಗಳ ಬಳಿಕ ಬಹಿರಂಗವಾಗಿದೆ.
ಪ್ರಧಾನಿಯೊಬ್ಬ ಇಷ್ಟು ಶ್ರದ್ಧೆ, ಭಕ್ತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.