ಮಂಗಳೂರು: ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಿ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕೊನೆಗೂ ಕರಾವಳಿಗರ ದಿಟ್ಟ ಹೋರಾಟಕ್ಕೆ ಮಣಿದು ಮಂಡಿಯೂರಿದ್ದಾರೆ. ಎರಡು ದಿನಗಳ ಕಾಲ ಕರಾವಳಿ ಪ್ರವಾಸ ನಡೆಸಿ ಮೀನುಗಾರರ ಸಮಸ್ಯೆಗಳನ್ನು ಆಲಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ದ.ಕ ಮತ್ತು ಉಡುಪಿ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರು, ‘ಸಿಎಂ ಕರಾವಳಿ ಪ್ರವಾಸಕೈಗೊಂಡು ಮೀನುಗಾರರ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಅವರನ್ನು ನಾವು ಜಿಲ್ಲೆಗೆ ಸಂತೋಷದಿಂದ ಸ್ವಾಗತಿಸುತ್ತೇವೆ, ಮೀನುಗಾರರ ಸಮಸ್ಯೆಯೊಂದಿಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಹಲವಾರು ಜ್ವಲಂತ ಸಮಸ್ಯೆಗಳತ್ತವೂ ಅವರು ಗಮನ ಹರಿಸಬೇಕೆಂಬುದು ನಮ್ಮ ಬೇಡಿಕೆ’ ಎಂದರು.
ಅಲ್ಲದೇ ಮೂರು ಜಿಲ್ಲೆಗಳ ಪ್ರಗತಿಪರರು, ಪರಿಸರವಾದಿ, ಮೀನುಗಾರ ಮುಖಂಡರು, ಜನಪ್ರತಿನಿಧಿಗಳನ್ನೊಳಗೊಂಡ ವೇದಿಕೆಯನ್ನು ನಾವು ಸೃಷ್ಟಿಸುತ್ತೇವೆ, ಈ ವೇದಿಕೆಯ ಸಭೆಯಲ್ಲೇ ಚರ್ಚಿಸಿ ಮುಖ್ಯಮಂತ್ರಿಗಳು ಕರಾವಳಿಯ ಸರ್ವತೋಮುಖ ಅಭಿವೃದ್ಧಿಗೆ ಕ್ರಮಕೈಗೊಳ್ಳಲಿ ಎಂದಿದ್ದಾರೆ.
ಕರಾವಳಿಯ ಕೃಷಿ ಚಟುವಟಿಕೆಗೆ ಉತ್ತೇಜನ, ಯುವ ಜನಾಂಗವನ್ನು ಇಲ್ಲೇ ಉಳಿಸಿಕೊಳ್ಳಲು ಉದ್ದಿಮೆ, ನೇತ್ರಾವತಿ ನದಿ ತಿರುವು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಎಂಡೋ ಪೀಡಿತ ಪುನರ್ವಸತಿ, ಹೆಜಮಾಡಿ ಬಂದರು ಇತ್ಯಾದಿಗಳ ಬಗ್ಗೆ ಸಿಎಂರೊಂದಿಗೆ ಚರ್ಚಿಸಲು ನಾವು ಉತ್ಸುಹುಕರಾಗಿದ್ದೇವೆ ಎಂದಿದ್ದಾರೆ.
ಅಲ್ಲದೇ ಕರಾವಳಿಗರಿಗೆ ಕೊಟ್ಟ ಮಾತನ್ನು ಸಿಎಂ ಉಳಿಸಿಕೊಳ್ಳಬೇಕು, ಮಾತು ತಪ್ಪಿ ಮತ್ತೊಮ್ಮೆ ವಚನ ಭ್ರಷ್ಟರಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.