ನವದೆಹಲಿ: ಕಳೆದ ಎಪ್ರಿಲ್ನಲ್ಲಿ ಯುಕೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕ್ವೀನ್ ಎಲಿಜಬೆತ್ ಅವರು ತಮ್ಮ ಮದುವೆಗೆ ಮಹಾತ್ಮ ಗಾಂಧೀಜಿ ಉಡುಗೊರೆಯಾಗಿ ನೀಡಿದ್ದ ಕಾಟನ್ ಲೇಸ್ನ್ನು ಉಡುಗೊರೆ ನೀಡಿದ್ದರು ಎಂಬ ಸುದ್ದಿ ಈಗ ಬಹಿರಂಗವಾಗಿದೆ.
1947ರ ನವೆಂಬರ್ನಲ್ಲಿ ಕ್ವೀನ್ ಎಲಿಜಬೆತ್ ಮತ್ತು ಪ್ರಿನ್ಸ್ ಪಿಲಿಪ್ ಅವರ ವಿವಾಹ ನಡೆದಿತ್ತು. ಈ ವಿವಾಹಕ್ಕೆ 2,500 ಉಡುಗೊರೆಗಳು ಬಂದಿದ್ದವು. ಅದರಲ್ಲಿ ಮಹಾತ್ಮ ಗಾಂಧೀಜಿ ನೀಡಿದ್ದ ಕಾಟನ್ ಲೇಸ್ ಕೂಡ ಒಂದಾಗಿತ್ತು.
ಈ ಕಾಟನ್ ಲೇಸ್ 12×24 ಇಂಚು ದೊಡ್ಡದಿದೆ, ಇದರ ಮಧ್ಯದಲ್ಲಿ ‘ಜೈ ಹಿಂದ್’ ಎಂದು ಬರೆಯಲಾಗಿದೆ. ಇದನ್ನು ಲಂಡನ್ಗೆ ಆಗಮಿಸಿದ್ದ ಮೋದಿಯವರಿಗೆ ಕ್ವೀನ್ ಎಲಿಜಬೆತ್ ಉಡುಗೊರೆ ನೀಡಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮೋದಿ ಪಡೆದ ಈ ವಿಶೇಷ ಉಡುಗೊರೆಯ ಬಗ್ಗೆ ಇತ್ತೀಚಿಗಷ್ಟೇ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.