ಲಕ್ನೋ: ಕರ್ತವ್ಯದಲ್ಲಿ ಅನರ್ಹತೆಯನ್ನು ಪ್ರದರ್ಶಿಸುತ್ತಿರುವ ಸರ್ಕಾರಿ ಉದ್ಯೋಗಿಗಳಿಗೆ 50 ವರ್ಷ ವಯಸ್ಸಲ್ಲೇ ಕಡ್ಡಾಯ ನಿವೃತ್ತಿ ನೀಡಲು ಉತ್ತರಪ್ರದೇಶ ಸರ್ಕಾರ ಆದೇಶಿಸಿದೆ.
50 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಉದ್ಯೋಗಿಗಳ ಸಂಪೂರ್ಣ ಸ್ಕ್ರೀನಿಂಗ್ ನಡೆಸಬೇಕು, ಅವರು ಕರ್ತವ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಪಕ್ಷದಲ್ಲಿ ಅವರಿಗೆ ನಿವೃತ್ತಿಯನ್ನು ನೀಡಬೇಕು ಎಂದು ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾಯದರ್ಶಿ ಮುಕುಲ್ ಸಿಂಘಾಲ್ ಆದೇಶಿಸಿದ್ದಾರೆ.
2018ರ ಮಾರ್ಚ್ 31ರ ವೇಳೆಗೆ 50 ವರ್ಷ ಪೂರೈಸಿರುವ ಎಲ್ಲಾ ಸರ್ಕಾರಿ ಉದ್ಯೋಗಿಗಳು ಜುಲೈ 31ರೊಳಗೆ ಈ ಸ್ಕ್ರೀನಿಂಗ್ಗೆ ಒಳಪಡಲಿದ್ದಾರೆ.
ಆದರೆ ಸರ್ಕಾರದ ಈ ಆದೇಶ ಸುಮಾರು 16 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಅಸಮಾಧಾನ ತಂದಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.