ತಿರುವನಂತಪುರಂ: ಗಂಧದ ತಿಲಕವಿಟ್ಟು ಕಿರು ಚಲನಚಿತ್ರದಲ್ಲಿ ಅಭಿನಯಿಸಿದ ಕಾರಣಕ್ಕೆ 10 ವರ್ಷದ ಬಾಲಕಿಯನ್ನು ಮದರಸದಿಂದಲೇ ಹೊರ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಮದರಸದ ಈ ಧೋರಣೆಯನ್ನು ಖಂಡಿಸಿ ಬಾಲಕಿಯ ತಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಉಮ್ಮರ್ ಮುಲಾಯಿಲ್ ಎಂಬುವವರು ತಮ್ಮ ಮಗಳಿಗೆ ಮದರಸವೆಸಗಿದ ಅನ್ಯಾಯವನ್ನು ಫೇಸ್ಬುಕ್ ಪೋಸ್ಟ್ನಲ್ಲಿ ವಿವರಿಸಿದ್ದು, ಅವರಿಗೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಮದರಸದ ಕ್ರಮವನ್ನು ಅನೆಕರು ಖಂಡಿಸಿದ್ದಾರೆ.
‘ನನ್ನ ಮಗಳು ಶಿಕ್ಷಣ ಮತ್ತು ಇತರ ಚಟುವಟಿಕೆಗಳಲ್ಲಿ ಸಾಕಷ್ಟು ಮುಂದಿದ್ದಾಳೆ. ನೃತ್ಯ, ಹಾಡುಗಾರಿಕೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. ಆಕೆಯ ಮುಗ್ಧ ಪ್ರತಿಭೆಗೆ ಮದರಸ ಅನ್ಯಾಯ ಮಾಡಿದೆ. ಕೇವಲ ಬಿಂದಿ ಇಟ್ಟದ್ದಕ್ಕಾಗಿ ಆಕೆಯನ್ನು ಹೊರ ಹಾಕಿದೆ’ ಎಂದು ಉಮರ್ ಹೇಳಿದ್ದಾರೆ.
ಆದರೆ ಮದರಸ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಶರಿಯತ್ ಕಾನೂನಿನಲ್ಲಿ ಬಿಂದಿ ಇಡಲು ಅವಕಾಶ ಇಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.