Monday, 23rd September 2019
×
Home About Us Advertise With s Contact Us

ಪಿಫಾ ವರ್ಲ್ಡ್ ಕಪ್ : ಸೋತರೂ ಸ್ವಚ್ಛತೆಯ ಪಾಠ ಹೇಳಿತು ಜಪಾನ್

ರಷ್ಯಾ : ಪಿಫಾ ವಲ್ಡ್ ಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ ತೀರಾ ಸನಿಹದಲ್ಲಿ ಸೋತು ನೋವುಂಡರೂ ಕ್ರೀಡಾ ಸ್ಫೂರ್ತಿ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಜಪಾನ್.

ಪಂದ್ಯ ಮುಕ್ತಾಯವಾದ ಬಳಿಕ ರೊಸ್ತೊವೋ ಅರೆನಾದ ಸ್ಟ್ಯಾಂಡ್‌ಗಳನ್ನು ಜಪಾನ್ ಅಭಿಮಾನಿಗಳು ಸ್ವಚ್ಛಗೊಳಿಸಿದ್ದಾರೆ. ಮಾತ್ರವಲ್ಲ ಜಪಾನ್ ತಂಡ ಕೂಡಾ ತನ್ನ ಲಾಕರ್ ರೂಂಗಳನ್ನು ಸ್ವಚ್ಛಗೊಳಿಸಿದೆ. ಅಲ್ಲದೆ ಪಿಫಾ ವರ್ಲ್ಡ್ ಕಪ್ ಆಯೋಜನೆಗೊಳಿಸಿದ ರಷ್ಯಾಕ್ಕೆ ಥ್ಯಾಂಕ್ಯೂ ನೋಟ್ ಬರೆದಿಟ್ಟಿದೆ.

ಜಪಾನಿಗರ ಈ ಕಾರ್ಯ ಇದೇ ಮೊದಲಲ್ಲ, ಈ ಹಿಂದಿನ ಪಂದ್ಯಗಳಲ್ಲೂ ಅವರು ಸ್ವಚ್ಛತೆಯ ಮೂಲಕ ಜಗತ್ತಿನ ಗಮನವನ್ನು ಸೆಳೆದಿದ್ದರು.

ಕೊಲಂಬೋ ವಿರುದ್ಧದ ಪಂದ್ಯದ ಬಳಿಕವೂ ಜಪಾನ್ ಅಭಿಮಾನಿಗಳು ಸ್ಟೇಡಿಯಂನ್ನು ಸ್ವಚ್ಛಗೊಳಿಸಿದ್ದರು. ಸೆನೆಗಲ್ ವಿರುದ್ಧದ ಪಂದ್ಯದ ಬಳಿಕವೂ ಸೆನೆಗಲ್ ಅಭಿಮಾನಿಗಳೊಂದಿಗೆ ಸೇರಿ ಅವರು ಸ್ವಚ್ಛತಾ ಕಾರ್ಯವನ್ನು ಮಾಡಿದ್ದರು.

ಜಪಾನ್‌ನಲ್ಲಿ ಕ್ರೀಡಾ ಪಂದ್ಯಾವಳಿಗಳ ಬಳಿಕ ಸ್ವಚ್ಛತಾ ಕಾರ್ಯವನ್ನು ಮಾಡುವುದು ಸರ್ವೇ ಸಾಮಾನ್ಯ., ಇದು ಆ ದೇಶದ ಘನತೆಯನ್ನು ತೋರಿಸುತ್ತದೆ ಮತ್ತು ಅಲ್ಲಿನ ಜನರಿಗೆ ಇರುವ ಸ್ವಚ್ಛತೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!