ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ‘ರಾಮ ರಾಜ್ಯ’ವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ ಮಾಡಿದ್ದು, ತಾರತಮ್ಯಗಳಿಲ್ಲದೆ ಸರ್ಕಾರ ನಡೆಸುವುದು ನಮ್ಮ ಧ್ಯೇಯ ಎಂದಿದೆ.
ಈ ಬಗ್ಗೆ ಘೋಷಣೆ ಮಾಡಿರುವ ಯೋಗಿ, ‘ಯುಪಿಯ ಬಿಜೆಪಿ ಸರ್ಕಾರ ರಾಮ ರಾಜ್ಯವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ ಮಾಡಿದ್ದು, ಇದರಡಿ ಯಾವುದೇ ತಾರತಮ್ಯಗಳು ಇರದು’ ಎಂದಿದ್ದಾರೆ.
‘ಡವ, ದೀನ, ದಲಿತ ಸೇರಿದಂತೆ ಸಮಾಜದ ಯಾವುದೇ ವರ್ಗದ ವಿರುದ್ಧ ತಾರತಮ್ಯಗಳನ್ನು ನಾವು ಮಾಡುವುದಿಲ್ಲ’. ರಾಮರಾಜ್ಯವನ್ನು ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿ ನಾವು ಸ್ವೀಕರಿಸಿದ್ದೇವೆ. ಯಾಕೆಂದರೆ ರಾಮ ರಾಜ್ಯದಲ್ಲಿ ಯಾವುದೇ ತಾರತಮ್ಯಗಳಿರಲಿಲ್ಲ ಎಂದಿದ್ದಾರೆ.
ನಮ್ಮ ರಾಜ್ಯದ ಎಲ್ಲಾ ವರ್ಗದ ಹಿಂದುಳಿದವರಿಗೆ ಮೂಲ ಸೌಕರ್ಯಗಳನ್ನು ಒದಗಿಸುವತ್ತ ಪ್ರಯತ್ನ ಜಾರಿಯಲ್ಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.