ನವದೆಹಲಿ: ಆಯ್ದ ಸುಮಾರು 201 ಜಿಲ್ಲೆಗಳಿಗೆ ಸಬ್ಸಿಡಿ ದರದಲ್ಲಿ ಧಾನ್ಯಗಳನ್ನು ಪೂರೈಕೆ ಮಾಡುವ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಮೂಲಗಳ ಪ್ರಕಾರ, ಸಾರ್ವಜನಿಕ ಪೂರೈಕಾ ವ್ಯವಸ್ಥೆಯ ಮೂಲಕ ರಾಷ್ಟ್ರೀಯ ಭದ್ರತಾ ಯೋಜನೆಗೊಳಪಟ್ಟ ಕುಟುಂಬಗಳಿಗೆ 2ಕೆಜಿ ಧಾನ್ಯಗಳು ಸಿಗಲಿವೆ.
ಕೃಷಿ ಸಚಿವಾಲಯವು ಈ ಯೋಜನೆಯ ಬಗ್ಗೆ ಪ್ರಸ್ತಾವಣೆಯನ್ನು ಸಿದ್ಧಪಡಿಸುತ್ತಿದೆ, ಯಾವೆಲ್ಲಾ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ನೀಡಬಹುದು ಎಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ. ದೇಶದಾದ್ಯಂತದ ಒಟ್ಟು 201 ಜಿಲ್ಲೆಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಸಚಿವಾಲಯವು 23 ಲಕ್ಷ ಟನ್ಗಳಷ್ಟು ಕಡ್ಲೆ ಬೇಳೆ, 15 ಲಕ್ಷ ಟನ್ಗಳಷ್ಟು ತೊಗರಿ ಬೇಳೆಗಳನ್ನು ದರ ಸ್ಥಿರತೆ ನಿಧಿಯಡಿಯಲ್ಲಿ ಸಂಗ್ರಹಿಸಿಟ್ಟಿದೆ.
ಮಾರುಕಟ್ಟೆಯಲ್ಲಿ ದರ ಇಳಿಕೆಯಾದ ವೇಳೆ ರೈತರು ನ್ಯಾಯಯುತವಾದ ದರವನ್ನೇ ಪಡೆಯಲಿ ಎಂಬ ಕಾರಣಕ್ಕೆ ಈ ನಿಧಿಯನ್ನು ರಚಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಹೆಸರು ಬೇಳೆ, ಉರ್ದು, ಮಸೂರ್ಗಳನ್ನು ಸಂಗ್ರಹಿಸಿ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.