ಲಕ್ನೋ: ಅಧಿಕಾರದ ದಾಹ ತುರ್ತುಪರಿಸ್ಥಿತಿಯನ್ನು ಹೇರಿದವರನ್ನು ಮತ್ತು ಅದನ್ನು ಬಲವಾಗಿ ವಿರೋಧಿಸಿದವರನ್ನು ಇಂದು ಒಂದುಗೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಸಂತ ಕಬೀರ ಜಿಲ್ಲೆಯ ಮೆಘರ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎರಡು ದಿನಗಳ ಹಿಂದೆ ತುರ್ತುಪರಿಸ್ಥಿತಿಯ 43ನೇ ವರ್ಷವನ್ನು ಸ್ಮರಿಸಿದ್ದೇವೆ. ಅಧಿಕಾರ ದಾಹದಿಂದಾಗಿ ಇಂದು ತುರ್ತುಪರಿಸ್ಥಿತಿ ಹೇರಿದವರು ಮತ್ತು ವಿರೋಧಿಗಳು ಒಂದಾಗಿದ್ದಾರೆ. ಅವರಿಗೆ ಸಮಾಜದ ಏಳಿಗೆ ಬೇಕಾಗಿಲ್ಲ, ತಮ್ಮ ಮತ್ತು ತಮ್ಮ ಕುಟುಂಬದ ಏಳಿಗೆಯಷ್ಟೇ ಬೇಕು’ ಎಂದರು.
ಅಲ್ಲದೇ ಭಾರತದಲ್ಲಿ ಅಸ್ಥಿರತೆಯನ್ನು ಉಂಟು ಮಾಡಲು ಬಯಸುವ ಕೆಲವು ರಾಜಕೀಯ ಪಕ್ಷಗಳು ಸಂತ ಕಬೀರ, ಮಹಾತ್ಮ ಗಾಂಧಿ, ಬಾಬಾ ಅಂಬೇಡ್ಕರ್ ಅವರಿಂದ ಕಲಿತುಕೊಳ್ಳಬೇಕು ಎಂದರು.
‘ಕೆಲವು ಪಕ್ಷಗಳಿಗೆ ಶಾಂತಿ ಮತ್ತು ಅಭಿವೃದ್ಧಿ ಬೇಕಾಗಿಲ್ಲ. ಅಸ್ಥಿರತೆಯಿದ್ದರೆ ತಮಗೆ ರಾಜಕೀಯವಾಗಿ ಲಾಭವಾಗುತ್ತದೆ ಎಂಬುದು ಅವರ ಅನಿಸಿಕೆ. ಆದರೆ ಸಂತ ಕಬೀರ, ಗಾಂಧಿಯಿದ್ದ ದೇಶದ ಮನೋಧರ್ಮ ಎಂತಹುದ್ದು ಎಂಬುದು ಅವರಿಗೆ ಇನ್ನೂ ತಿಳಿದಿಲ್ಲ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.