ನವದೆಹಲಿ: ಈ ಹಿಂದಿನ ಯುಪಿಎ ಸರ್ಕಾರ 2012, 2013 ಮತ್ತು 2014ನೇ ಸಾಲಿನಲ್ಲಿ ತೈಲ ಬಾಂಡ್ಗಳ ಮೂಲಕ 1.44 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಲವಾಗಿ ಪಡೆದುಕೊಂಡಿತ್ತು. ಈ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ಬಳಿಕ ಬಂದ ಎನ್ಡಿಎ ಸರ್ಕಾರದ ಮೇಲೆ ಬಿತ್ತು. ನರೇಂದ್ರ ಮೊದಿ ನೇತೃತ್ವದಲ್ಲಿ ಸರ್ಕಾರವು ಕಳೆದ 4 ವರ್ಷಗಳಲ್ಲಿ 1.44 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಿದೆ. ಜೊತೆಗೆ 70 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲದ ಮೇಲಿನ ಬಡ್ಡಿ ದರ ಕೂಡಾ. ಒಟ್ಟಾಗಿ 2 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ತೀರಿಸಿದಂತಾಗಿದೆ.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದು, ‘ಹಿಂದಿನ ಸರ್ಕಾರ ತೈಲ ಬಾಂಡ್ಗಳ ಮೂಲಕ ಪಡೆದಿದ್ದ ರೂ.2 ಲಕ್ಷ ಕೋಟಿ ಸಾಲವನ್ನು ತೀರಿಸಿದ್ದೇವೆ. ಇದರಲ್ಲಿ ರೂ.70 ಸಾವಿರ ಕೋಟಿ ಬಡ್ಡಿಯೂ ಸೇರಿದೆ. ಸಾಲ ಮರುಸಂದಾಯ ಮಾಡುವ ಮೂಲಕ ಜವಾಬ್ದಾರಿಯಿಂದ ಮುಕ್ತರಾಗಿದ್ದೇವೆ, ಪ್ರಸ್ತುತ ತೈಲ ಬೆಲೆ ಏರಲು ಇದು ಕೂಡ ಒಂದು ಕಾರಣ’ ಎಂದಿದ್ದಾರೆ.
‘ತನ್ನ ಮುಂದಿನ ಪೀಳಿಗೆಗಾಗಿ ಆಸ್ತಿ ಸಂಪತ್ತನ್ನು ಮಾಡಿಡುವ ತಂದೆಯನ್ನು ನಮ್ಮ ಸಮಾಜದಲ್ಲಿ ಗೌರವದಿಂದ ನೋಡಲಾಗುತ್ತದೆ. ಆದರೆ ಮುಂದಿನ ಪೀಳಿಗೆಗೆ ಅಪಾರ ಸಾಲದ ಹೊರೆಯನ್ನು ಹೊರಿಸುವ ತಂದೆಯ ಬಗ್ಗೆ ಏನು ಹೇಳಲು ಸಾಧ್ಯ?’ ಎನ್ನುವ ಮೂಲಕ ಅವರು ತೈಲ ಬೆಲೆ ಏರಿಕೆಯ ಬಗ್ಗೆ ಬೊಬ್ಬೆ ಹಾಕುತ್ತಿರುವ ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.