ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಮರು ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 16 ಸಾವಿರ ಮರಗಳನ್ನು ಬಲಿಕೊಡಲು ಎನ್ಬಿಸಿಸಿ ಮುಂದಾಗಿದೆ. ಇದರ ವಿರುದ್ಧ ಅಲ್ಲಿನ ನಾಗರಿಕರು ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮರಗಳನ್ನು ಉರುಳಿಸಲು ಬಿಡುವುದಿಲ್ಲ ಎಂದು ಪಣತೊಟ್ಟಿದ್ದಾರೆ.
ಸರೋಜಿನಿ ನಗರದಲ್ಲಿ ಶನಿವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ನೂರಾರು ಸಂಖ್ಯೆಯ ದೆಹಲಿಗರು ಇಲ್ಲಿ ಜಮಾವಣೆಗೊಂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಯಾಂಡಲ್ ಹೊತ್ತಿಸಿ ತಮ್ಮ ಪ್ರತಿಭಟನೆ ತೋರಿಸುತ್ತಿದ್ದಾರೆ. ಮರಗಳನ್ನು ಕೊಲ್ಲಬೇಡಿ, ನಮ್ಮ ಉಸಿರಾಟ ಹಕ್ಕನ್ನು ಕಿತ್ತುಕೊಳ್ಳಬೇಡಿ ಎಂಬಿತ್ಯಾದಿ ಫಲಕಗಳನ್ನು ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹರಿಬಿಡಲಾಗಿದ್ದು, ಹೆಚ್ಚು ಹೆಚ್ಚು ಜನರ ಬೆಂಬಲ ಲಭಿಸಿದೆ. #ಸೇವ್ ದೆಹಲಿ#ದೆಹಲಿಟ್ರೀಸ್ಎಸ್ಒಎಸ್#ಸೇವ್ಟ್ರೀಸ್ಸೇವ್ದೆಹಲಿ ಎಂಬಿತ್ಯಾದಿ ಹ್ಯಾಶ್ಟ್ಯಾಗ್ಗಳನ್ನು ಬಳಸಿ ಜನರನ್ನು ಮರಗಳನ್ನು ಕಡಿಯುವುದರ ವಿರುದ್ಧದ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮರಗಳನ್ನು ಅಪ್ಪಿಕೊಳ್ಳುವ ಮತ್ತು ಅವುಗಳಿಗೆ ರಾಖಿ ಕಟ್ಟುವ ಕಾರ್ಯಕ್ರಮಗಳನ್ನೂ ಆಯೋಜನೆಗೊಳಿಸಲಾಗಿದೆ. ಸ್ಥಳಿಯರ ಪ್ರತಿಭಟನೆಗೆ ಹೆದರಿ ಎನ್ಬಿಸಿಸಿ ತನ್ನ ಮರಕಡಿಯುವ ಯೋಜನೆಯನ್ನು ಕೈಬಿಡುವುದೇ ಎಂದು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.