ಚೆನ್ನೈ: ಕಲಾನಿಧಿ ಮಾರನ್ ನೇತೃತ್ವದ ಸನ್ ಟಿವಿಯ ೩೩ ಚಾನೆಲ್ಗಳು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ಈ ಚಾನೆಲ್ಗಳಿಗೆ ಭದ್ರತಾ ಅನುಮತಿಯನ್ನು ನೀಡಲು ಕೇಂದ್ರ ಗೃಹಸಚಿವಾಲಯ ನಿರಾಕರಿಸಿದೆ, ಅಲ್ಲದೇ ಪರವಾನಗಿ ರದ್ದಾಗುವ ಸಾಧ್ಯತೆಯೂ ಇದೆ. ಈ ಹಿನ್ನಲೆಯಲ್ಲಿ ಚಾನೆಲ್ಗಳು ಸ್ಥಗಿತಗೊಳ್ಳಲಿವೆ ಎನ್ನಲಾಗಿದೆ.
ಮಾರನ್ ವಿರುದ್ಧ ಪ್ರಸ್ತುತ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಯುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಅನುಮತಿ ನೀಡಲು ನಿರಾಕರಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅನುಮತಿ ನೀಡುವುದರ ಪರವಾಗಿ ಪತ್ರ ಬರೆದಿತ್ತಾದರೂ ಗೃಹ ಸಚಿವಾಲಯ ಇದನ್ನು ತಿರಸ್ಕರಿಸಿತು ಎಂದು ಮೂಲಗಳು ತಿಳಿಸಿವೆ.
ಇದೀಗ ಆದೇಶವನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸುವಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಗೃಹಸಚಿವಾಲಯಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸನ್ ಟಿವಿ, ‘ಇದುವರೆಗೆ ಗೃಹಸಚಿವಾಲಯದ ಆದೇಶದ ಪ್ರತಿ ನಮ್ಮ ಕೈಸೇರಿಲ್ಲ ಎಂದಿದೆ. ಅಲ್ಲದೇ ಈ ಬಗ್ಗೆ ಕಾನೂನು ಸಲಹೆಗಳನ್ನು ಪಡೆದು ಮುಂದುವರೆಯುವುದಾಗಿ ತಿಳಿಸಿದೆ.
ಗೃಹಸಚಿವಾಲಯದ ಆದೇಶ ಹೊರಬೀಳುತ್ತಿದ್ದಂತೆ ಸನ್ ಟಿವಿಯ ಷೇರು ಶೇ.೨೦ರಷ್ಟು ಕುಸಿತ ಕಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.