ನವದೆಹಲಿ: ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿರುವ ರೈತರ ಶ್ರಮವನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಉಳಿವಿಗೆ ರೈತ ಅನಿವಾರ್ಯ ಎಂದಿದ್ದಾರೆ.
ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಬುಧವಾರ ದೇಶದ 600 ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸಿದ ಅವರು, ‘ರೈತರನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ, ಮತ್ತು ಅವರ ಅಭಿವೃದ್ಧಿಗೆ ಹೆಚ್ಚಿಗೆ ಏನನ್ನೂ ಮಾಡಲಾಗಿಲ್ಲ. ರೈತರ ಸಹಾಯಕ್ಕಾಗಿ ತಂತ್ರಜ್ಞಾನಿಕ ಆವಿಷ್ಕಾರಗಳು ಅತ್ಯಗತ್ಯ. ಇದನ್ನು ಮನಗಂಡು ನಮ್ಮ ಸರ್ಕಾರ ರೈತರ ಅಭಿವೃದ್ಧಿಗೆ ಮುಂದಾಗಿದೆ. ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿ ಎಂಬ ಕಾರಣಕ್ಕೆ ವ್ಯವಸ್ಥೆಯಿಂದ ಮಧ್ಯವರ್ತಿಗಳನ್ನು ತೆಗೆದು ಹಾಕುವ ಕಾರ್ಯ ಮಾಡುತ್ತಿದ್ದೇವೆ’ ಎಂದರು.
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಉತ್ಪನ್ನಕ್ಕೆ ಸರಿಯಾದ ಬೆಲೆ ದೊರಕುವುದು ಕಡ್ಡಾಯ. ಬೆಳೆದ ಬೆಳೆ ನಷ್ಟವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದಾಯಕ್ಕೆ ಪರ್ಯಾಯ ಮೂಲವೂ ಅತ್ಯಗತ್ಯ ಎಂದರು.
ಕಳೆದ ಮೂರು ವರ್ಷಗಳಿಂದ ಕೃಷಿ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಯಾಗಿದೆ ಎಂದ ಅವರು, ಕೃಷಿ ವಲಯಕ್ಕೆ ರೂ.2 ಲಕ್ಷ ಕೋಟಿಯನ್ನು ಬಜೆಟ್ನಲ್ಲಿ ನೀಡಿದ್ದೇವೆ. ದಾಖಲೆ ಮಟ್ಟದಲ್ಲಿ ಧಾನ್ಯಗಳ, ಹಣ್ಣು, ತರಕಾರಿಗಳ, ಹಾಲಿನ ಉತ್ಪಾದನೆಯಾಗಿದೆ. ಬ್ಲೂ ರೆವಲ್ಯೂಷನ್ನ ಫಲವಾಗಿ ಮೀನುಗಾರಿಕ ವಲಯ ಶೇ.26ರಷ್ಟು ಪ್ರಗತಿ ಕಂಡಿದೆ. ಪಶುಸಂಗೋಪಣಾ ವಲಯವೂ ಶೇ.24ರಷ್ಟು ಪ್ರಗತಿ ಕಂಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.