ನವದೆಹಲಿ: ಭಾರತ ಎಲ್ಲಾ ವಲಯದಲ್ಲೂ ಚೇತರಿಕೆಯನ್ನು ಕಾಣುತ್ತಿದ್ದು, ಮೇ ತಿಂಗಳಲ್ಲಿ ರಫ್ತಿನ ಗ್ರಾಫ್ ಕೂಡ ಮೇಲಕ್ಕೇರಿದೆ. ಕಳೆದ ತಿಂಗಳಲ್ಲಿ ರಫ್ತು ಶೇ.20.18 ಏರಿಕೆಯಾಗಿದೆ. ಕಳೆದ 6 ತಿಂಗಳಿಗೆ ಹೋಲಿಸಿದರೆ ಇದು ಅತೀಹೆಚ್ಚಿನ ಪ್ರಗತಿಯಾಗಿದೆ.
ಪ್ರಗತಿ ಮತ್ತು ವಹಿವಾಟು ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದ ಸಚಿವ ಸುರೇಶ್ ಪ್ರಭು, ಮೇ ತಿಂಗಳಲ್ಲಿ ಯುಎಸ್ಡಿ 43.48 ಬಿಲಿಯನ್ ಮೊತ್ತದ ಆಮದು ಮಾಡಲಾಗಿದ್ದು, ಆಮದಿನ ಪ್ರಮಾಣದಲ್ಲಿ ಶೇ.14.48ರಷ್ಟು ಏರಿಕೆಯಾಗಿದೆ ಎಂದರು.
ಪೆಟ್ರೋಲಿಂ ಉತ್ಪನ್ನಗಳು, ಕೆಮಿಕಲ್, ಔಷಧಿಗಳು, ಎಂಜಿನಿಯರಿಂಗ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ.
ಗೋಡಂಬಿ, ಕಬ್ಬಿಣದ ಅದಿರು, ಟೆಕ್ಸ್ಟೈಲ್, ಹರಳುಗಳು, ಆಭರಣ, ಕರಕುಶಲ ವಸ್ತು, ಕಾರ್ಪೆಟ್ಗಳನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.