ಶ್ರೀನಗರ: ಇತ್ತೀಚಿಗೆ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೈಯಲ್ಪಟ್ಟ ಯೋಧ ಔರಂಗಜೇಬ್ ಅವರ ತಂದೆ ಮತ್ತು ಸಹೋದರ ಭಾರತೀಯ ಸೇನೆಯನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಔರಂಗಜೇಬ್ ಅವರು 44 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ನಲ್ಲಿ ನಿಯೋಜಿಸಲ್ಪಟ್ಟ ರೈಫಲ್ಮ್ಯಾನ್ ಆಗಿದ್ದರು. ಎಪ್ರಿಲ್ನಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್ನನ್ನು ಎನ್ಕೌಂಟರ್ ನಡೆಸಿದ್ದ ಸೇನಾಧಿಕಾರಿ ಮೇಜರ್ ರೋಹಿತ್ ಶುಕ್ಲಾ ಅವರಿಗೆ ಇವರು ಆತ್ಮೀಯರಾಗಿದ್ದರು. ಈ ಆತ್ಮೀಯತೆಯೇ ಅವರನ್ನು ಉಗ್ರರು ಹತ್ಯೆ ಮಾಡಲು ಕಾರಣವಾಗಿದೆ.
ಹತ್ಯೆಗೂ ಮುನ್ನ ಇವರನ್ನು ವಿಚಾರಣೆ ನಡೆಸಿದ್ದ ಉಗ್ರರು ಅದರ ವೀಡಿಯೋವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋದಲ್ಲಿ ಔರಂಗಜೇಬ್ ಅವರು ತಾನು ಶುಕ್ಲಾ ಆಪ್ತ, ಅವರಿಗೆ ಹಲವು ವಿಷಯಗಳಲ್ಲಿ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮಗನ ಸಾವಿನ ಬಳಿಕ ತೀವ್ರ ದುಃಖಕ್ಕೀಡಾಗಿರುವ ಔರಂಗಜೇಬ್ ತಂದೆ ಮತ್ತು ಸಹೋದರ ತಾವೂ ಸೇನೆ ಸೇರಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಮ್ಮ ದೇಶಾಭಿಮಾನ ಎಂತಹುದ್ದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.