ನವದೆಹಲಿ: ಭಾರತೀಯ ಸೇನೆಯ ’ಪ್ರೊಜೆಕ್ಟ್ ಕಾಶ್ಮೀರ್ ಸೂಪರ್ 50’ ಯೋಜನೆಯಲ್ಲಿ 32 ಕಾಶ್ಮೀರಿ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ 32 ವಿದ್ಯಾರ್ಥಿಗಳು ಇಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ರನ್ನು ಭೇಟಿಯಾದರು.
’ಕಠಿಣ ಪರಿಶ್ರಮ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಇವರನ್ನು ಪ್ರೇರೇಪಿಸಲಾಗಿತ್ತು’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಭಾರತೀಯ ಸೇನೆ, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಹಾಗೂ ಪೆಟ್ರೊನೆಟ್ ಎಲ್ಎನ್ಜಿ ಲಿಮಿಟೆಡ್ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ’ಪ್ರೊಜೆಕ್ಟ್ ಕಾಶ್ಮೀರ್ ಸೂಪರ್ 50’ ಉಪಕ್ರಮದಡಿಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು 32 ಕಾಶ್ಮೀರಿ ವಿದ್ಯಾರ್ಥಿಗಳು ಜೆಇಇ ಮೇನ್ಸ್ 2018ರ ಪರೀಕ್ಷೆಯನ್ನು ಪಾಸಾಗಿದ್ದಾರೆ.
2013ರಲ್ಲಿ ಭಾರತೀಯ ಸೇನೆ ಹಾಗೂ ಇತರ ಎನ್ಜಿಒಗಳ ಸಹಾಯದಿಂದ ಪ್ರಾರಂಭವಾಗಿದ್ದ ಪ್ರಾಜಿಕ್ಟ್ನಲ್ಲಿ ಈ 32 ವಿದ್ಯಾರ್ಥಿಗಳ ಗುಂಪು 5ನೇ ಬ್ಯಾಚ್ ಆಗಿ ಈಗ ಹೊರಹೊಮ್ಮಿದೆ. ಈ ಪ್ರಾಜೆಕ್ಟ್ಗೆ 12ನೇ ತರಗತಿಯಲ್ಲಿ ಶೇ.70ಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.