ವಿಜಯವಾಡ: ವೇದ ಮಂತ್ರಗಳ ಉದ್ಘೋಷದೊಂದಿಗೆ ಶನಿವಾರ ಬೆಳಿಗ್ಗೆ 8.49ಗಂಟೆಯ ಶುಭ ಮುಹೂರ್ತದಲ್ಲಿ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ‘ಭೂಮಿ ಪೂಜೆ’ ನೆರವೇರಿಸಲಾಯಿತು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಪತ್ನಿ ಭುವನೇಶ್ವರಿ ಮತ್ತು ಪುತ್ರ ಎನ್.ಲೋಕೇಶ್ ಅವರೊಂದಿಗೆ ಸೇರಿ ಗುಂಟೂರು ಜಿಲ್ಲೆಯಿಂದ 20ಕಿ.ಮೀ ದೂರದಲ್ಲಿರುವ ಮಂಡದಾಮ್ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ನಾಯ್ಡು ಭೂಮಿಯನ್ನು ಅಗೆದರೆ, ಅವರ ಪತ್ನಿ ಅದರಲ್ಲಿ ನವರತ್ನಗಳನ್ನು ಹಾಕಿದರು. ಕೃಷ್ಣ ನದಿ ದಂಡೆಯಲ್ಲಿ ಹೋಮ, ಹವನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೇಂದ್ರ ಮತ್ತು ರಾಜ್ಯ ಸಚಿವರುಗಳು, ಸಂಸದರು, ಶಾಸಕರು ಸೇರಿದಂತೆ ತೆಲುಗುದೇಶಂ ಪಕ್ಷದ ವಿವಿಧ ನಾಯಕರು ಈ ಪೂಜೆಯಲ್ಲಿ ಪಾಲ್ಗೊಂಡು, ಪ್ರಾರ್ಥನೆಯನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ’21ನೇ ಶತಮಾನದ ರಾಜಧಾನಿಯನ್ನು ನಿರ್ಮಿಸುವ ಅವಕಾಶ ಆಂಧ್ರದ ಜನತೆಗೆ ದೊರೆತಿದ್ದು ಅದೃಷ್ಟ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.