ಮುಜಾಫರ್ನಗರ: ತಮ್ಮ ತಂದೆ ರಜಪೂತನಾ ರೈಫಲ್ಸ್ 2ನೇ ಬೆಟಾಲಿಯನ್ನ ಲ್ಯಾನ್ಸ್ ನಾಯ್ಕ್ ಬಚನ್ ಸಿಂಗ್ ಹುತಾತ್ಮರಾದಾಗ ಹಿತೇಶ್ ಕುಮಾರ್ ಅವರ ವಯಸ್ಸು ಕೇವಲ 6 ವರ್ಷ. ಆದರೆ ತಂದೆಯಂತೆ ತಾನೂ ಸೇನೆ ಸೇರುತ್ತೇನೆ ಎಂಬ ದೃಢ ನಿರ್ಧಾರವನ್ನು ಅವರು ಅಂದೇ ಕೈಗೊಂಡಿದ್ದರು.
ಅಂದುಕೊಂಡಂತೆ ತಮ್ಮ ತಂದೆ ಸತ್ತು 19 ವರ್ಷಗಳ ಬಳಿಕ ಹಿತೇಶ್ ಸೇನೆಯ ಲೆಫ್ಟಿನೆಂಟ್ ಆಗಿದ್ದಾರೆ. ಅದು ಕೂಡ ತಮ್ಮ ತಂದೆಯ ಬೆಟಾಲಿಯನ್ನಲ್ಲೇ ನಿಯೋಜನೆಗೊಂಡಿದ್ದಾರೆ.
ಡೆಹ್ರಾಡೂನ್ ಮಿಲಿಟರಿ ಅಕಾಡಮಿಯಿಂದ ಪಾಸಿಂಗ್ ಔಟ್ ಆದ ತಕ್ಷಣ ಮುಜಾಫರ್ನಗರದ ಸಿಟಿಲೈನ್ನಲ್ಲಿನ ತಮ್ಮ ತಂದೆಯ ಸ್ಮಾರಕಕ್ಕೆ ಅವರು ನಮನ ಸಲ್ಲಿಸಿದರು.
ಬಚನ್ ಅವರು ತೊಲಿಂಗ್ನಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದರು. ಆ ದಾಳಿಯಲ್ಲಿ ಮೇಜರ್ ವಿವೇಕ್ ಗುಪ್ತಾ ಸೇರಿದಂತೆ ಒಟ್ಟು 19 ಸೈನಿಕರು ಮೃತರಾಗಿದ್ದರು.
ಬಚನ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ತಂದೆಯಂತೆ ಅವರು ಕೂಡ ಸೇನೆಗೆ ಸೇರ್ಪಡೆಯಾಗಬೇಕು ಎಂಬುದು ಅವರ ಪತ್ನಿಯ ಆಶಯವೂ ಆಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.