ನವದೆಹಲಿ: ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಇಲಾಖೆಗಳಲ್ಲಿ 10 ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳನ್ನು ಸೃಷ್ಟಿಸಿದೆ. ಪ್ರತಿಭಾನಿತ್ವ, ಉತ್ಸಾಹಿಗಳಿಗಾಗಿ ಈ ಹುದ್ದೆ ಸೃಷ್ಟಿಯಾಗಿದ್ದು, ಖಾಸಗಿ ವಲಯದವರೂ ಈ ಹುದ್ದೆಯನ್ನೇರಬಹುದಾಗಿದೆ.
ಈ ಬಗ್ಗೆ ಪ್ರಮುಖ ದಿನಪತ್ರಿಕೆಯಲ್ಲಿ ಜಾಹೀರಾತನ್ನು ನೀಡಲಾಗಿದ್ದು, ‘ಸರ್ಕಾರ ಖಾಸಗಿ ವಲಯ ಸೇರಿದಂತೆ 10 ಪ್ರತಿಭಾನಿತ್ವ ವ್ಯಕ್ತಿಗಳನ್ನು ಎದುರು ನೋಡುತ್ತಿದೆ, ಆದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್, ಪರಿಸರ, ಅರಣ್ಯ, ಹವಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ನಾಗರಿಕ ವಿಮಾನಯಾನ, ವಾಣಿಜ್ಯ ವಲಯದಲ್ಲಿ ಪರಿಣಿತಿ ಹೊಂದಿರುವವರು ಇದಕ್ಕೆ ಅರ್ಜಿ ಹಾಕಬಹುದು’ ಎಂದಿದೆ.
ವೈಯಕ್ತಿಕ ಇಲಾಖೆಯೂ ಅಧಿಸೂಚನೆಯನ್ನು ಹೊರಡಿಸಿದ್ದು, ‘ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗಿ ಕೊಡುಗೆ ನೀಡಲು ಬಯಸುತ್ತಿರುವ ಉತ್ಸಾಹಿಗಳು, ಪ್ರತಿಭಾನ್ವಿತರು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಸರ್ಕಾರವನ್ನು ಸೇರಿಕೊಳ್ಳಬಹುದು’ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.